ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಭಾನುವಾರ ಮಹಾರಾಣಿ ಟ್ರೋಫಿ ಜಯಿಸಿದ ಹುಬ್ಬಳ್ಳಿ ಟೈಗರ್ಸ್ ಮಹಿಳಾ ತಂಡ
ಬೆಂಗಳೂರು: ಮೋನಿಕಾ ಸಿ ಪಟೇಲ್ ಅವರ ಆಲ್‌ರೌಂಡ್ ಆಟ ಹಾಗೂ ಪ್ರಿಯಾ ಚವಾಣ್ ಅಮೋಘ ಬೌಲಿಂಗ್ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಇದೇ ಮೊದಲ ಬಾರಿ ಮಹಿಳೆಯರಿಗಾಗಿ ಆಯೋಜಿಸಿದ್ದ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ‘ಮಹಾರಾಣಿ ಟ್ರೋಫಿ’ ಗೆದ್ದುಕೊಂಡಿತು.
ಭಾನುವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೈಗರ್ಸ್ 11 ರನ್‌ಗಳಿಂದ ಮೈಸೂರು ವಾರಿಯರ್ಸ್ ವಿರುದ್ಧ ಗೆದ್ದಿತು.
ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡವು ಮೈಸೂರು ಬಳಗದ ಪೂಜಾಕುಮಾರಿ (27ಕ್ಕೆ4) ಮತ್ತು ವಂದಿತಾ ಕೃಷ್ಣರಾವ್ (8ಕ್ಕೆ3) ಅವರ ಉತ್ತಮ ಬೌಲಿಂಗ್ ಎದುರು 107 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಹುಬ್ಬಳ್ಳಿ ತಂಡದ ಮೋನಿಕಾ 23 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಮೈಸೂರು ತಂಡವನ್ನೂ ಮೋನಿಕಾ ಕಾಡಿದರು. ಅವರು 2 ವಿಕೆಟ್ ಗಳಿಸಿದರು. ಅವರೊಂದಿಗೆ ಉತ್ತಮ ಜೊತೆ ನೀಡಿದ ಪ್ರಿಯಾ ಚವಾಣ್ (10ಕ್ಕೆ3) ಕೂಡ ಮೈಸೂರು ಬ್ಯಾಟರ್‌ಗಳಿಗೆ ಒತ್ತಡ ಹಾಕಿದರು. ಇದರಿಂದಗಿ ಮೈಸೂರು ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 96 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಹುಬ್ಬಳ್ಳಿ ಟೈಗರ್ಸ್:19.5 ಓವರ್‌ಗಳಲ್ಲಿ 107 (ಮೋನಿಕಾ ಸಿ ಪಟೇಲ್ 23, ಬಿ.ಜಿ. ತೇಜಸ್ವಿನಿ 22, ಸಹನಾ ಎಸ್ ಪವಾರ್ 27ಕ್ಕೆ2, ವಂದಿತಾ ಕೃಷ್ಣ ರಾವ್ 8ಕ್ಕೆ3, ಪೂಜಾ ಕುಮಾರಿ 27ಕ್ಕೆ4)
ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 7ಕ್ಕೆ96 (ಯಾಶಿಕಾ ಗೌಡ 33, ಶಿಶಿರಾ ಎ ಗೌಡ 41, ಮೋನಿಕಾ ಸಿ ಪಟೇಲ್ 21ಕ್ಕೆ2, ಪ್ರಿಯಾ ಚವಾಣ್ 10ಕ್ಕೆ3) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 11 ರನ್ ಜಯ.
ಪಂದ್ಯದ ಆಟಗಾರ್ತಿ: ಪ್ರಿಯಾ ಚವಾಣ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.