ವಿನೋದ್ ಕಾಂಬ್ಳಿ
(ಪಿಟಿಐ ಚಿತ್ರ)
ಠಾಣೆ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಿಕ್ ಇಂದು (ಬುಧವಾರ) ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕಾಂಬ್ಳಿ ಅವರನ್ನು ಭೇಟಿಯಾದ ಬಳಿಕ ಸಚಿವರು, ಕ್ರಿಕೆಟಿಗನ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ.
ಮೂತ್ರನಾಳದ ಸೋಂಕಿನಿಂದಾಗಿ 51 ವರ್ಷದ ಕಾಂಬ್ಳಿ ಅವರನ್ನು ಡಿಸೆಂಬರ್ 21ರಂದು ಭಿವಂಡಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂಬ್ಳಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಒದಗಿಸಲಾಗುತ್ತಿದೆ.
'ಭಾರತೀಯ ಕ್ರಿಕೆಟ್‌ನ ಮಿನುಗು ತಾರೆಯಾಗಿರುವ ಕಾಂಬ್ಳಿ, ಸದಾ ತಮ್ಮ ಪ್ರದರ್ಶನದಿಂದ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಕಣ್ಣುಗಳು ಈಗಲೂ ಮೈದಾನದಲ್ಲಿದ್ದ ದೃಢತೆ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸವಿದೆ' ಎಂದು ಠಾಣೆ ಕ್ಷೇತ್ರದ ಶಾಸಕರಾಗಿರುವ ಪ್ರತಾಪ್ ಸರ್‌ನಾಯಿಕ್ ತಿಳಿಸಿದ್ದಾರೆ.
'ನಾನು ಕಾಂಬ್ಳಿ ಅವರ ಕುಟುಂಬದವರ ಜತೆಗೂ ಮಾತನಾಡಿದ್ದೇನೆ. ಅವರಿಗೆ ಉತ್ತಮ ವೈದ್ಯಕೀಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದೇನೆ' ಎಂದು ಶಿವಸೇನಾ ನಾಯಕರೂ ಆಗಿರುವ ಸರ್‌ನಾಯಿಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.