ADVERTISEMENT

Ind vs Eng: ಮೊದಲ ಟೆಸ್ಟ್‌ಗೆ ಮಯಂಕ್ ಅಗರವಾಲ್‌ ಅಲಭ್ಯ

ಪಿಟಿಐ
Published 2 ಆಗಸ್ಟ್ 2021, 15:50 IST
Last Updated 2 ಆಗಸ್ಟ್ 2021, 15:50 IST
ಮಯಂಕ್ ಅಗರವಾಲ್‌ - ಬಿಸಿಸಿಐ ಚಿತ್ರ
ಮಯಂಕ್ ಅಗರವಾಲ್‌ - ಬಿಸಿಸಿಐ ಚಿತ್ರ   

ನಾಟಿಂಗ್‌ಹ್ಯಾಂ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಿಂದ ಟೀಂ ಇಂಡಿಯಾ ಆರಂಭಿಕ ಆಟಗಾರ ಮಯಂಕ್ ಅಗರವಾಲ್ ಹೊರಗುಳಿಯುವಂತಾಗಿದೆ.

ಟ್ರೆಂಟ್‌ಬ್ರಿಜ್‌ನಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಶಾರ್ಟ್‌ ಎಸೆತ ಅವರ ತಲೆಗೆ ಬಡಿದಿತ್ತು. ಪರಿಣಾಮವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ‘ಕಂಕಷನ್’ ನಿಯಮದ ಪ್ರಕಾರ ಅವರು ಪಂದ್ಯದಿಂದ ಹೊರಗುಳಿಯಬೇಕಾಗಿದೆ.

ಅಗರವಾಲ್ ವೈದ್ಯಕೀಯ ನಿಗಾದಲ್ಲಿ ಇರಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ADVERTISEMENT

ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ದಾಳಿ ಎದುರಿಸುತ್ತಿದ್ದಾಗ ಚೆಂಡು ಅಗರವಾಲ್ ಅವರ ಹೆಲ್ಮೆಟ್‌ಗೆ ಬಡಿದಿತ್ತು. ಬಳಿಕ ಬಳಲಿದಂತೆ ಕಂಡುಬಂದಿದ್ದ ಅವರು ಬ್ಯಾಟಿಂಗ್‌ ನಿಲ್ಲಿಸಿದ್ದರು. ತಂಡದ ಫಿಸಿಯೊ ನಿತಿನ್ ಪಟೇಲ್‌ ನೆರವಿನಿಂದ ನೆಟ್ಸ್‌ನಿಂದ ನಿರ್ಗಮಿಸಿದ್ದರು.

ತಲೆಯ ಒಳಭಾಗಕ್ಕೆ ಗಾಯವಾಗಿರುವ ಲಕ್ಷಣಗಳು ಕಂಡುಬಂದ ಕಾರಣ ಅಗರವಾಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮೊದಲ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಅಗರವಾಲ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಆರಂಭಿಕನಾಗಿ ಕ್ರೀಸಿಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಇದೇ 4ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.