ADVERTISEMENT

ವಾಂಖೆಡೆ: ಮೊದಲ ಪಂದ್ಯ ಆಡಿದ್ದ ಎಂಟು ಮಂದಿಗೆ ₹ 10 ಲಕ್ಷ

ಪಿಟಿಐ
Published 16 ಜನವರಿ 2025, 0:18 IST
Last Updated 16 ಜನವರಿ 2025, 0:18 IST
<div class="paragraphs"><p>ಮುಂಬೈನ ವಾಂಖೆಡೆ ಕ್ರೀಡಾಂಗಣ</p></div>

ಮುಂಬೈನ ವಾಂಖೆಡೆ ಕ್ರೀಡಾಂಗಣ

   

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಮೊತ್ತಮೊದಲ ಪ್ರಥಮ ದರ್ಜೆ ಪಂದ್ಯ ಆಡಿದ ಆಟಗಾರರಲ್ಲಿ ಈಗ ಇರುವ ಎಂಟು ಮಂದಿಗೆ ಮುಂಬೈ ಕ್ರಿಕೆಟ್‌ ಸಂಸ್ಥೆ ತಲಾ 10 ಲಕ್ಷ ಪುರಸ್ಕಾರ ನೀಡುವುದಾಗಿ ಬುಧವಾರ ಪ್ರಕಟಿಸಿದೆ.

1974–75ನೇ ಸಾಲಿನಲ್ಲಿ ಆಡಿದ್ದ ಆಗಿನ ಬಾಂಬೆ ತಂಡದ ಈ ಎಂಟು ಆಟಗಾರರೆಂದರೆ– ಸುನೀಲ್ ಗಾವಸ್ಕರ್, ಕರ್ಸನ್ ಘಾವ್ರಿ, ಪದ್ಮಾಲ್ಕರ್ ಶಿವಾಲ್ಕರ್, ಫರೂಕ್ ಎಂಜಿನಿಯರ್, ಅಜಿತ್‌ ಪೈ, ಮಿಲಿಂದ್ ರೇಗೆ, ಅಬ್ದುಲ್ ಇಸ್ಮಾಯಿಲ್ ಮತ್ತು ರಾಕೇಶ್ ಟಂಡನ್.ಮೊದಲ ಪಂದ್ಯ ಆಡಿದ ಆಟಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಈ ಘೋಷಣೆ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.