ADVERTISEMENT

ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ

ಪಿಟಿಐ
Published 2 ಆಗಸ್ಟ್ 2020, 15:07 IST
Last Updated 2 ಆಗಸ್ಟ್ 2020, 15:07 IST
ಸುನಿಲ್‌ ಗಾವಸ್ಕರ್ (ಎಡ)‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರೊಂದಿಗೆ ದಿಲೀಪ್‌ ವೆಂಗ್‌ಸರ್ಕಾರ್‌ (ಬಲ)–ಪಿಟಿಐ ಚಿತ್ರ
ಸುನಿಲ್‌ ಗಾವಸ್ಕರ್ (ಎಡ)‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರೊಂದಿಗೆ ದಿಲೀಪ್‌ ವೆಂಗ್‌ಸರ್ಕಾರ್‌ (ಬಲ)–ಪಿಟಿಐ ಚಿತ್ರ   

ಮುಂಬೈ: ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ಭಾರತದ ಖ್ಯಾತ ಕ್ರಿಕೆಟಿಗದಿಲೀಪ್‌ ವೆಂಗ್‌ಸರ್ಕಾರ್‌ ಅವರ ಹೆಸರಿಡುವಂತೆ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಪೆಕ್ಸ್‌ ಕೌನ್ಸಿಲ್ ಸದಸ್ಯ ನದೀಮ್‌ ಮೆಮನ್‌ ಒತ್ತಾಯಿಸಿದ್ದಾರೆ.

‘ಮುಂಬೈನ ಕ್ರಿಕೆಟಿಗನಾಗಿರುವ ವೆಂಗ್‌ಸರ್ಕಾರ್‌‌ ಅವರು 116 ಟೆಸ್ಟ್‌ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ತಂಡದ ನಾಯಕತ್ವವನ್ನೂ ವಹಿಸಿದ್ದರು. ವಾಂಖೆಡೆ ಕ್ರೀಡಾಂಗಣದ ಉತ್ತರ ಸ್ಟ್ಯಾಂಡ್‌ನ ಎ,ಬಿ,ಸಿ ಬ್ಲಾಕ್‌ಗಳಿಗೆ ಅವರ ಹೆಸರಿಡುವಂತೆ ಪ್ರಸ್ತಾಪ ಸಲ್ಲಿಸಿದ್ದೇನೆ‘ ಎಂದು ನದೀಮ್‌ ಅವರು ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ವಿಜಯ್‌ ಪಾಟೀಲ್‌ ಹಾಗೂ ಅಪೆಕ್ಸ್‌ ಕೌನ್ಸಿಲ್‌ನ ಎಲ್ಲ ಸದಸ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

’ಕ್ರೀಡಾಂಗಣದ ಬ್ಲಾಕ್‌ಗಳಿಗೆವೆಂಗ್‌ಸರ್ಕಾರ್ ಹೆಸರಿಟ್ಟರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ‘ ಎಂದು ಕ್ಯೂರೇಟರ್‌ ಕೂಡ ಆಗಿರುವ ಮೆಮನ್‌ ಹೇಳಿದ್ದಾರೆ.

ADVERTISEMENT

ವಾಂಖೆಡೆ ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ಈಗಾಗಲೇ ಬ್ಯಾಟಿಂಗ್‌ ದಿಗ್ಗಜರಾದ ಸುನಿಲ್‌ ಗಾವಸ್ಕರ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿಡಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಇವರು ಮುಂಬೈ ತಂಡವನ್ನು ಪ್ರತಿನಿಧಿಸಿದ್ದಾರೆ.

ಮುಂದಿನ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕೆಂದು ಮೆಮನ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.