ADVERTISEMENT

ಮಿಯಾಮಿ ಓಪನ್ ಟೆನಿಸ್ ಟೂರ್ನಿ: ರೋಹನ್‌ ಬೋಪಣ್ಣ, ಸಾನಿಯಾ ಮಿರ್ಜಾಗೆ ನಿರಾಸೆ

ಎಕಟೆರಿನಾ ಅಲೆಕ್ಸಾಂಡ್ರೋವಾ, ಜಾಂಕ್ಸ್ವಾನ್ ಯಾಂಗ್‌ ಜಯಭೇರಿ

ಪಿಟಿಐ
Published 30 ಮಾರ್ಚ್ 2022, 12:51 IST
Last Updated 30 ಮಾರ್ಚ್ 2022, 12:51 IST
ರೋಹನ್ ಬೋಪಣ್ಣ –ಎಎಫ್‌ಪಿ ಚಿತ್ರ
ರೋಹನ್ ಬೋಪಣ್ಣ –ಎಎಫ್‌ಪಿ ಚಿತ್ರ   

ಮಿಯಾಮಿ: ‌ಭಾರತದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಡಬಲ್ಸ್ ಪಂದ್ಯಗಳಲ್ಲಿ ಅವರು ಸೋತರು.

‌ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಲೊವ್ ಜೋಡಿಯನ್ನು ಆರನೇ ಶ್ರೇಯಾಂಕದ ವೆಸ್ಲಿ ಕೂಲಾಫ್ ಮತ್ತು ನೀಲ್ ಸ್ಕುಪ್‌ಸ್ಕಿ 6–2, 6–1ರಲ್ಲಿ ಮಣಿಸಿದರು. ವೆಸ್ಲಿ ನೆದರ್ಲೆಂಡ್ಸ್‌ನವರು ಮತ್ತು ನೀಲ್ ಬ್ರಿಟನ್‌ ಆಟಗಾರ.

2019ರಿಂದ ಆಗೊಮ್ಮೆ ಈಗೊಮ್ಮೆ ಜೊತೆಯಾಗಿ ಆಡುತ್ತಿರುವ ರೋಹನ್ ಮತ್ತು ಕೆನಡಾದ ಡೆನಿಸ್ ಅವರು ಇಲ್ಲಿ ಶ್ರೆಯಾಂಕ ರಹಿತ ಆಟಗಾರರಾಗಿದ್ದರು. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಜೋಡಿ ಅಗ್ರ ಶ್ರೇಯಾಂಕದ ಕ್ರೊವೇಷ್ಯಾ ಜೋಡಿ ನಿಕೋಲಾ ಮೆಕ್ಟಿಕ್ ಮತ್ತು ಮಟಿ ಪೇವಿಕ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ್ದರು. ‌

ADVERTISEMENT

ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್‌ಕೆನ್ಸ್ ಪ್ರಬಲ ಪೈಪೋಟಿ ನೀಡಿ ಸೋಲೊಪ್ಪಿಕೊಂಡರು. ಅವರನ್ನು ರಷ್ಯಾದ ಎಕಟೆರಿನಾ ಅಲೆಕ್ಸಾಂಡ್ರೋವಾ ಮತ್ತು ಚೀನಾದ ಜಾಂಕ್ಸ್ವಾನ್ ಯಾಂಗ್ 6–3, 7–6 (3)ರಲ್ಲಿ ಸೋಲಿಸಿದರು. ಒಂದು ತಾಸು 23 ನಿಮಿಷ ಈ ಪಂದ್ಯ ನಡೆದಿತ್ತು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.