ADVERTISEMENT

ಐಪಿಎಲ್ | ತವರಿಗೆ ಮರಳಿದ ಆರ್‌ಸಿಬಿಯ ಮೈಕ್ ಹೆಸನ್

ಪಿಟಿಐ
Published 28 ಏಪ್ರಿಲ್ 2020, 19:45 IST
Last Updated 28 ಏಪ್ರಿಲ್ 2020, 19:45 IST
ಮೈಕ್ ಹೆಸನ್
ಮೈಕ್ ಹೆಸನ್   

ನ್ಯೂಜಿಲೆಂಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್ ಹೆಸನ್ ಅಂತೂ ಇಂತೂ ಮಂಗಳವಾರ ತಮ್ಮ ತವರು ನ್ಯೂಜಿಲೆಂಡ್‌ಗೆ ಮರಳಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶದಲ್ಲಿ ಲಾಕ್‌ಡೌನ್‌ ವಿಧಿಸುವ ಮುನ್ನವೇ ಅವರು ಭಾರತಕ್ಕೆ ಬಂದಿದ್ದರು. ಆದರೆ. ಮರಳಿ ಹೋಗಲು ಸಾಧ್ಯವಾಗಿರಲಿಲ್ಲ. ವಿದೇಶಿ ವಿಮಾನಯಾನ ಕೂಡ ರದ್ದಾಗಿದ್ದರಿಂದ ಅವರು ಇಲ್ಲಿಯವರೆಗೂ ಬೆಂಗಳೂರಿನಲ್ಲಿಯೇ ಇದ್ದರು.

‘ಹೆಚ್ಚು ಕಡಿಮೆ ಒಂದು ದಿನದ ಬಸ್‌ ಪ್ರಯಾಣದಲ್ಲಿ ಮುಂಬೈ ವಿಮಾನ ನಿಲ್ದಾಣ ತಲುಪಿದೆ. ದಾರಿಯಲ್ಲಿ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಂಡೆ. ಎಲ್ಲ ಸಿಬ್ಬಂದಿಯ ನೆರವು ತುಂಬಾ ಸೊಗಸಾಗಿತ್ತು’ ಎಂದು ಹೆಸನ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಭಾರತದ ಪ್ರಧಾನಿ ನರೇಂದ್ರ ಮೋದಿ, ನ್ಯೂಜಿಲೆಂಡ್‌ ರಾಯಭಾರಿ ಕಚೇರಿ,ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡ್ರನ್ ಮತ್ತು ನ್ಯೂಜಿಲೆಂಡ್ ವಿದೇಶಾಂಗಸಚಿವಾಲಯದ ನೆರವಿಗೆ ನಾನು ಅಭಾರಿ’ ಎಂದು ಉಲ್ಲೇಖಿಸಿದ್ದಾರೆ.

ಮೈಕ್ ಮಾರ್ಚ್‌ 5ರಂದು ಭಾರತಕ್ಕೆ ಬಂದಿದ್ದರು. ಅದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯ ಸಿದ್ಧತೆಯನ್ನು ಆರಂಭಿಸಿದ್ದರು. ಆದರೆ, ಕೊರೊನಾ ವೈರಸ್‌ ಲಾಕ್‌ಡೌನ್‌ ನಿಂದಾಗಿ ಟೂರ್ನಿಯನ್ನು ಮುಂದೂಡಲಾಯಿತು. ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.