ADVERTISEMENT

SRH ತಂಡದ ಆಟಗಾರರು ಉಳಿದುಕೊಂಡಿದ್ದ ಹೈದರಾಬಾದ್ ಹೋಟೆಲ್‌ನಲ್ಲಿ ಅಗ್ನಿ ಅವಘಡ

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಆಟಗಾರರಿಗೆ ಹಾನಿಯಾಗಿಲ್ಲ ಎಂದು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಿಟಿಐ
Published 14 ಏಪ್ರಿಲ್ 2025, 11:23 IST
Last Updated 14 ಏಪ್ರಿಲ್ 2025, 11:23 IST
<div class="paragraphs"><p>ಎಸ್‌ಆರ್‌ಎಚ್‌</p></div>

ಎಸ್‌ಆರ್‌ಎಚ್‌

   

ಹೈದರಾಬಾದ್: ಐಪಿಎಲ್‌ ಕ್ರಿಕೆಟ್ ತಂಡವಾದ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡದ ಆಟಗಾರರು ಉಳಿದುಕೊಂಡಿದ್ದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಖಾಸಗಿ ಐಷಾರಾಮಿ ಹೋಟೆಲ್‌ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿರುವ ಘಟನೆ ಇಂದು ನಡೆದಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಆಟಗಾರರಿಗೆ ಹಾನಿಯಾಗಿಲ್ಲ ಎಂದು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹೋಟೆಲ್‌ ಸ್ಪಾ ಒಳಗಿನ ಸ್ಟೀಮ್ ರೂಂನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಇದೊಂದು ಸಣ್ಣ ಪ್ರಮಾಣದ ಬೆಂಕಿ ಅವಘಡವಾಗಿತ್ತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಕಿ ಅವಘಡ ಉಂಟಾದ ವೇಳೆ ಸ್ಪಾ ಒಳಗೆ ಎಸ್‌ಆರ್‌ಎಚ್‌ನ ಯಾವುದೇ ಆಟಗಾರರು ಇರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.