ADVERTISEMENT

ಭಾರತ ಪ್ರವಾಸ; ಕಿವೀಸ್ ತಂಡದಲ್ಲಿ ಗಾಯಾಳು ಕಾನ್ವೆ ಸ್ಥಾನಕ್ಕೆ ಮಿಚೆಲ್ ಆಯ್ಕೆ

ಪಿಟಿಐ
Published 14 ನವೆಂಬರ್ 2021, 10:54 IST
Last Updated 14 ನವೆಂಬರ್ 2021, 10:54 IST
ಡೆರಿಲ್ ಮಿಚೆಲ್
ಡೆರಿಲ್ ಮಿಚೆಲ್   

ವೆಲ್ಲಿಂಗ್ಟನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಬೆನ್ನಲ್ಲೇ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್, ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿವೆ.

ಈ ನಡುವೆ ಕಿವೀಸ್ ಟೆಸ್ಟ್ ತಂಡದಲ್ಲಿ ಗಾಯಾಳು ಡೆವೊನ್ ಕ್ವಾನೆ ಸ್ಥಾನಕ್ಕೆ ಡೆರಿಲ್ ಮಿಚೆಲ್ ಅವರನ್ನು ಸೇಪರ್ಡೆಗೊಳಿಸಲಾಗಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಾನ್ವೆ, ತಮ್ಮದೇ ತಪ್ಪಿನಿಂದಾಗಿ ಬಲಗೈಗೆ ಗಾಯಮಾಡಿಕೊಂಡಿದ್ದರು. ಔಟ್ ಆದ ನಿರಾಶೆಯಲ್ಲಿ ಬ್ಯಾಟ್‌ಗೆ ಬಲವಾಗಿ 'ಪಂಚ್' ಮಾಡಿದ ಪರಿಣಾಮ ಗಾಯಗೊಂಡಿದ್ದರು. ಇದರಿಂದಾಗಿ ಭಾರತ ಸರಣಿಗೆ ಅಲಭ್ಯರಾಗಿದ್ದಾರೆ.

46 ರನ್ ಗಳಿಸಿ ಕಾನ್ವೆ ತಂಡದ ಗೆಲುವಿನಲ್ಲಿ ಅಮೂಲ್ಯ ಕೊಡುಗೆ ಸಲ್ಲಿಸಿದ್ದರು.

ಅತ್ತ ಪಾಕ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿರುವ ಮಿಚೆಲ್‌ (ಅಜೇಯ 72) ಅವರಿಗೆ ಟೆಸ್ಟ್ ತಂಡದಲ್ಲೂ ಸ್ಥಾನ ಕಲ್ಪಿಸಲಾಗಿದೆ. 47 ಎಸೆತಗಳನ್ನು ಎದುರಿಸಿದ ಮಿಚೆಲ್ ಇನ್ನಿಂಗ್ಸ್‌ನಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಭಾರತ ಪ್ರವಾಸದಲ್ಲಿ ಕಿವೀಸ್ ತಂಡವು ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.