ADVERTISEMENT

ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದ ಮೋಯಿನ್ ಅಲಿಗೆ ದಂಡ

ಪಿಟಿಐ
Published 18 ಜೂನ್ 2023, 19:00 IST
Last Updated 18 ಜೂನ್ 2023, 19:00 IST
   

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ತಂಡದ ಆಟಗಾರ ಮೋಯಿನ್ ಅಲಿ ಅವರಿಗೆ ಪಂದ್ಯ ಶುಲ್ಕದ ಶೇ 25ರಷ್ಟು ಮೊತ್ತದ ದಂಡ ವಿಧಿಸಲಾಗಿದೆ.

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಅವರು ತಾವು ಬೌಲಿಂಗ್ ಮಾಡುವ ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದರು. ಇನಿಂಗ್ಸ್‌ನ 89ನೇ ಓವರ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲಿ ಈ ದ್ರಾವಣವನ್ನು ತಮ್ಮ ಕೈಬೆರಳುಗೆ ಸಿಂಪಡಿಸಿಕೊಂಡಿದ್ದು ಟಿವಿಯಲ್ಲಿ ಪ್ರಸಾರವಾಗಿತ್ತು. ಸಿಂಪಡಿಸಿಕೊಂಡ ನಂತರ ಅವರು ಬೌಲಿಂಗ್ ಮಾಡಿದರು. ’ಪೂರ್ವಾನುಮತಿ ಇಲ್ಲದೇ ಈ ರೀತಿಯ ದ್ರಾವಣಗಳನ್ನು ಬಳಸುವಂತಿಲ್ಲ. ಐಸಿಸಿಯ ನೀತಿಸಂಹಿತೆಯ 2.20ನೇ ನಿಯಮದ ಉಲ್ಲಂಘನೆಯಾಗಿದೆ. ಆದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ‘ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೋಯಿನ್ ಅಲಿ ಕೂಡ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ 24 ತಿಂಗಳುಗಳಲ್ಲಿ ಇದು ಅವರ ಮೊದಲ ನಿಯಮ ಉಲ್ಲಂಘನೆಯ ಪ್ರಕರಣವಾಗಿದೆ. ಅಂಪೈರ್‌ಗಳಾದ ಎಹಸಾನ್ ರಝಾ ಮರಾಯಸ್ ಯರಸ್‌ಮಸ್ ಮೂರನೇ ಅಂಪೈರ್ ಕ್ರಿಸ್ ಗಫಾನಿ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್‌ ವರದಿ ನೀಡಿದರು. ಪಂದ್ಯ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ವಿಚಾರಣೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.