ADVERTISEMENT

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಎದುರಿನ ಸರಣಿಗಳಿಗೆ ಭಾರತ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 6:02 IST
Last Updated 4 ಆಗಸ್ಟ್ 2022, 6:02 IST
ರೋಹಿತ್ ಶರ್ಮಾ 
ರೋಹಿತ್ ಶರ್ಮಾ    

ನವದೆಹಲಿ:‌ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಎದುರಿನ ಸರಣಿಗಳಿಗೆ ಭಾರತವು ಆತಿಥ್ಯ ವಹಿಸಲಿದೆ.

ಸೆ 20ರಿಂದ 25ರವರೆಗೆ ಆಸ್ಟ್ರೇಲಿಯಾ ತಂಡವು ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ.

ದಕ್ಷಿಣ ಆಫ್ರಿಕಾ ತಂಡವು ಸೆ 28ರಿಂದ ಅಕ್ಟೋಬರ್‌ 4ವರೆಗೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಎರಡೂ ಸರಣಿಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನದ ಸಿದ್ಧತೆಯ ವೇದಿಕೆಗಳಾಗಿವೆ.

ADVERTISEMENT

ಅ. 6ರಿಂದ 11ರವರೆಗೆ ದಕ್ಷಿಣ ಆಫ್ರಿಕಾ ಹಾಗೂ ಭಾರತ ಮೂರು ಏಕದಿನ ಪಂದ್ಯಗಳಲ್ಲಿ ಆಡಲಿವೆ.

ವೇಳಾಪಟ್ಟಿ

* ಆಸ್ಟ್ರೇಲಿಯಾ ಟಿ20 ಸರಣಿ

ಮೊಹಾಲಿ(ಸೆ 20), ನಾಗಪುರ (ಸೆ 23) ಹಾಗೂ ಹೈದರಾಬಾದ್ (ಸೆ 25)

* ದಕ್ಷಿಣ ಆಫ್ರಿಕಾ ಟಿ20 ಸರಣಿ

ತಿರುವನಂತಪುರಂ (ಸೆ 28), ಗುವಾಹಟಿ (ಅ.2) ಮತ್ತು ಇಂದೋರ್ (ಅ. 4)

* ದಕ್ಷಿಣ ಆಫ್ರಿಕಾ ಏಕದಿನ ಸರಣಿ

ಲಖನೌ (ಅ.6), ರಾಂಚಿ (ಅ.9) ಹಾಗೂ ದೆಹಲಿ (ಅ.11)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.