ADVERTISEMENT

ಪಾಕಿಸ್ತಾನ ಕ್ರಿಕೆಟ್‌ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಮೊಹಮ್ಮದ್ ವಾಸೀಂ ನೇಮಕ

ಏಜೆನ್ಸೀಸ್
Published 19 ಡಿಸೆಂಬರ್ 2020, 11:22 IST
Last Updated 19 ಡಿಸೆಂಬರ್ 2020, 11:22 IST
ಪಿಸಿಬಿ ಲೋಗೊ
ಪಿಸಿಬಿ ಲೋಗೊ   

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಮಾಜಿ ಆಟಗಾರ ಮೊಹಮ್ಮದ್ ವಾಸೀಂ ನೇಮಕಗೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಇವರ ಅಧಿಕಾರಾವಧಿ ಇದೆ.

ಕೋಚ್ ಹುದ್ದೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಅಕ್ಟೋಬರ್‌ನಲ್ಲಿ ಮಿಸ್ಬಾ ಉಲ್ ಹಕ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ತೊರೆದಿದ್ದರು. ಅವರ ಸ್ಥಾನದಲ್ಲಿ ಈಗ 43 ವರ್ಷದ ವಾಸೀಂ ನೇಮಕಗೊಂಡಿದ್ದಾರೆ.

‘ಗುರುವಾರ ಮತ್ತು ಶುಕ್ರವಾರ ನಡೆದ ಅಂತಿಮ ಸುತ್ತಿನ ಆನ್‌ಲೈನ್ ಸಂದರ್ಶನದ ನಂತರ ವಾಸೀಂ ಅವರ ನೇಮಕಾತಿಯನ್ನು ಮಂಡಳಿಯ ಅಧ್ಯಕ್ಷ ಎಹಸಾನ್‌ ಮಣಿ ಅನುಮೋದಿಸಿದ್ದಾರೆ‘ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.

ADVERTISEMENT

‘ಇದು ಕಾರ್ಯಕ್ಷಮತೆ-ಆಧಾರಿತ ಜಗತ್ತು ಮತ್ತು ತವರಿನ ಮತ್ತು ಅಂತರರಾಷ್ಟ್ರೀಯ ಪಿಚ್‌ ಪರಿಸ್ಥಿತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ತಂಡಗಳನ್ನು ಆಯ್ಕೆ ಮಾಡುವುದು ನನ್ನ ತತ್ವ‘ ಎಂದು ವಾಸೀಂ ಹೇಳಿದ್ದಾರೆ.

ರಾವಲ್ಪಿಂಡಿಯ ವಾಸೀಂ 1996–2000ರ ಅವಧಿಯಲ್ಲಿ ಪಾಕಿಸ್ತಾನ ತಂಡದ ಪರ 18 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅವರು ಒಟ್ಟು 783 ರನ್ ಕಲೆಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.