
ಪ್ರಜಾವಾಣಿ ವಾರ್ತೆ
ರಾಂಚಿ: ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಆಹ್ವಾನಿಸಿ ಔತಣ ಕೂಟ ಏರ್ಪಡಿಸಿದ್ದರು.
ಈ ಕುರಿತು ಯಜುವೇಂದ್ರ ಚಾಹಲ್ ಟ್ವೀಟ್ ಮಾಡಿದ್ದು, ‘ಔತಣ ಕೂಟ ಏರ್ಪಡಿಸಿದ್ದ ಧೋನಿ ದಂಪತಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ಮಹೀ ಭಾಯ್ ಮನೆಯಲ್ಲಿ ತಂಡ ಆಟಗಾರರುಉತ್ತಮ ಊಟದೊಂದಿಗೆ ಅದ್ಭುತ ರಾತ್ರಿಯನ್ನು ಕಳೆದಿದ್ದೇವೆ’ ಎಂದು ನಾಯಕ ವಿರಾಟ್ ಕೊಹ್ಲಿ ಇಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಗರದ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಾಳೆ (ಶುಕ್ರವಾರ) ಭಾರತ–ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಹೈದರಾಬಾದ್ ಹಾಗೂ ನಾಗ್ಪುರದಲ್ಲಿ ನಡೆದಿದ್ದ ಮೊದಲೆರಡು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿ ಭಾರತ 2–0ರಲ್ಲಿ ಮುನ್ನಡೆ ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.