ADVERTISEMENT

ವಿಡಿಯೊ: ವಿರಾಟ್‌ ಕೊಹ್ಲಿ ಹುಟ್ಟುಹಬ್ಬದ ಆಚರಣೆಗೆ ಮುಂದಾಳತ್ವ ವಹಿಸಿದ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2021, 11:11 IST
Last Updated 6 ನವೆಂಬರ್ 2021, 11:11 IST
ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬದ ಅಚರಣೆ (ಬಿಸಿಸಿಐ ಟ್ವಿಟರ್ ಚಿತ್ರ)
ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬದ ಅಚರಣೆ (ಬಿಸಿಸಿಐ ಟ್ವಿಟರ್ ಚಿತ್ರ)   

ದುಬೈ: ಟೀಮ್‌ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ 33ನೇ ಹುಟ್ಟುಹಬ್ಬವನ್ನು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕೇಕ್‌ ಕತ್ತರಿಸಿ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

ಈ ಸಂಭ್ರಮಾಚರಣೆಯ ಮುಂದಾಳತ್ವವನ್ನು ಮೆಂಟರ್‌ ಎಂ.ಎಸ್‌.ಧೋನಿ ವಹಿಸಿದ್ದು, ವಿಶೇಷವಾಗಿತ್ತು. ಸದ್ಯ ಈ ವಿಡಿಯೊವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಸ್ಕಾಟ್ಲೆಂಡ್ ವಿರುದ್ಧ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ADVERTISEMENT

ಇದರೊಂದಿಗೆ ಭಾರತವು ಸೆಮಿಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಈಗ ಎಲ್ಲರ ಕಣ್ಣು ಭಾನುವಾರ ನಡೆಯಲಿರುವ ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಮೇಲೆ ನೆಟ್ಟಿದೆ.

ಕೊಹ್ಲಿ ಹುಟ್ಟುಹಬ್ಬದ ಅಂಗವಾಗಿ ಪತ್ನಿ ಅನುಷ್ಕಾ ಶರ್ಮಾ, ಹಿರಿಯ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.