ADVERTISEMENT

ಕ್ರಿಕೆಟ್‌: ಮುನಾಫ್ ಪಟೇಲ್ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 20:15 IST
Last Updated 10 ನವೆಂಬರ್ 2018, 20:15 IST
ಮುನಾಫ್ ಪಟೇಲ್‌
ಮುನಾಫ್ ಪಟೇಲ್‌   

ಬೆಂಗಳೂರು: ಭಾರತ ತಂಡದ ವೇಗದ ಬೌಲರ್‌ ಮುನಾಫ್ ಪಟೇಲ್‌ ಅವರು ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ವೆಬ್‌ಸೈಟ್‌ಗಳು ಈ ವಿಷಯವನ್ನು ಪ್ರಕಟಿಸಿವೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರು ಆಡಿದ್ದರು.

2006ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮುನಾಫ್‌ಗೆ ಈಗ 35 ವರ್ಷ. ಒಟ್ಟು 13 ಟೆಸ್ಟ್‌, 70 ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಅವರು ಆಡಿದ್ದಾರೆ. ಒಟ್ಟು 125 ವಿಕೆಟ್ ಕಬಳಿಸಿದ್ದಾರೆ.

ಗುಜರಾತ್‌ನ ಇಕ್‌ಹಾರ್‌ನಲ್ಲಿ ಜನಿಸಿದ ಮುನಾಫ್‌ ದೇಶಿ ಕ್ರಿಕೆಟ್‌ನಲ್ಲಿ ಮುಂಬೈ, ಮಹಾರಾಷ್ಟ್ರ, ಬರೋಡ ಮತ್ತು ಗುಜರಾತ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ರಾಜಸ್ಥಾನ ರಾಯಲ್ಸ್‌ ಮತ್ತು ಗುಜರಾತ್ ಲಯನ್ಸ್‌ ತಂಡಗಳಿಗಾಗಿ ಆಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.