ADVERTISEMENT

ಹಿಂದೂಸ್ತಾ‌ನ್‌ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್‌: ಆತಿಥೇಯ ಮೈಸೂರು ವಿ.ವಿ ‘ರನ್ನರ್‌ ಅಪ್‌’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:15 IST
Last Updated 10 ಡಿಸೆಂಬರ್ 2019, 20:15 IST
‘ರನ್ನರ್‌ ಅಪ್‌’ ಆದ ಮೈಸೂರು ವಿ.ವಿ ತಂಡ. ಕೋಚ್‌ ಮನ್ಸೂರ್‌ ಅಹ್ಮದ್‌ ಮತ್ತು ಮ್ಯಾನೇಜರ್ ಕೃಷ್ಣಕುಮಾರ್‌ ಇದ್ದಾರೆ
‘ರನ್ನರ್‌ ಅಪ್‌’ ಆದ ಮೈಸೂರು ವಿ.ವಿ ತಂಡ. ಕೋಚ್‌ ಮನ್ಸೂರ್‌ ಅಹ್ಮದ್‌ ಮತ್ತು ಮ್ಯಾನೇಜರ್ ಕೃಷ್ಣಕುಮಾರ್‌ ಇದ್ದಾರೆ   

ಮೈಸೂರು: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿತಂಡದವರು ಇಲ್ಲಿ ಕೊನೆಗೊಂಡ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ ಹಿಂದೂಸ್ತಾನ್‌ ವಿ.ವಿ ತಂಡ 29 ರನ್‌ಗಳಿಂದ ಆತಿಥೇಯ ಮೈಸೂರು ವಿ.ವಿ ತಂಡವನ್ನು ಮಣಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ನ ಜವಾಹರಲಾಲ್‌ ನೆಹರೂ ತಾಂತ್ರಿಕ ವಿ.ವಿ ತಂಡ 13 ರನ್‌ಗಳಿಂದ ಬೆಂಗಳೂರಿನ ಜೈನ್‌ ವಿ.ವಿ ತಂಡವನ್ನು
ಮಣಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್: ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿ,ಚೆನ್ನೈ: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 232 (ಆದಿತ್ಯ ರಘುನಾಥನ್ 69,ಆರ್‌.ಕವಿನ್ 50,ನಂದನ್ ನಾರಾಯಣ್ 39ಕ್ಕೆ 3)ಮೈಸೂರು ವಿ.ವಿ 41.2 ಓವರ್‌ಗಳಲ್ಲಿ 203 (ವಿಷ್ಣುಪ್ರಿಯನ್ 41,ಬಿ.ಧೀಮಂತ್ 35,ಎನ್‌.ಎಸ್‌.ಹರೀಶ್ 42ಕ್ಕೆ 3,ಅಜಿತ್‌ ಕುಮಾರ್ 25ಕ್ಕೆ 2) ಫಲಿತಾಂಶ: ಹಿಂದೂಸ್ತಾನ್‌ ವಿ.ವಿಗೆ 29 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.