
ನವದೆಹಲಿ: ಭಾರತ ತಂಡವು ನಮಿಬಿಯಾಗೆ 210 ರನ್‌ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು.
ಭಾರತ ಪರ ಕಿಸನ್ 61 ರನ್ ಬಾರಿಸಿ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯ ಕೂಡ 53 ರನ್ ಗಳಿಸಿದರು. ನಮಿಬಿಯಾ ನಾಯಕ ಎರಸ್ಮಸ್ 4 ವಿಕೆಟ್ ಪಡೆದರು..
ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಭಾರತ ತಂಡವು ಅಮೆರಿಕ ವಿರುದ್ಧ ಜಯಿಸಿದೆ. ಆದರೆ ನಮಿಬಿಯಾ ನೆದರ್ಲೆಂಡ್ಸ್ ವಿರುದ್ಧ ಪರಾಭವಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.