ADVERTISEMENT

ICC New Rules: ಟಿ20 ಕ್ರಿಕೆಟ್‌ಗೆ ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2025, 11:46 IST
Last Updated 27 ಜೂನ್ 2025, 11:46 IST
<div class="paragraphs"><p>ಭಾರತ ಕ್ರಿಕೆಟ್‌ ತಂಡದ ಆಟಗಾರರು</p></div>

ಭಾರತ ಕ್ರಿಕೆಟ್‌ ತಂಡದ ಆಟಗಾರರು

   

ಪಿಟಿಐ ಚಿತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ), ಓವರ್‌ಗಳು ಕಡಿತಗೊಳ್ಳುವ ಟಿ20 ಪಂದ್ಯಗಳಿಗೆ ಹೊಸದಾಗಿ ಪವರ್‌ಪ್ಲೇ ನಿಯಮಗಳನ್ನು ಪರಿಚಯಿಸಿದೆ.

ADVERTISEMENT

ಯಾವುದೇ ಪಂದ್ಯದಲ್ಲಿ ಓವರ್‌ಗಳು ಕಡಿತಗೊಂಡರೆ ಅದಕ್ಕೆ ತಕ್ಕಂತೆ ಎಷ್ಟು ಓವರ್‌ ವರೆಗೆ ಪವರ್‌ಪ್ಲೇ ಜಾರಿಯಲ್ಲಿರಲಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ಹೊಸ ನಿಯಮಗಳು ಜುಲೈನಿಂದ ಜಾರಿಗೆ ಬರಲಿವೆ.

ಹೊಸ ನಿಯಮಗಳ ಪ್ರಕಾರ, ಪ್ರತಿ ಇನಿಂಗ್ಸ್‌ 5 ಓವರ್‌ಗಳಿಗೆ ಕಡಿತಗೊಂಡರೆ ಇನ್ನು ಮುಂದೆ 1.3 ಓವರ್‌ ಪವರ್‌ಪ್ಲೇ ಇರಲಿದೆ. ಅದೇ ರೀತಿ, ಪ್ರತಿ ಇನಿಂಗ್ಸ್‌ 8 ಓವರ್‌ಗಳಿಗೆ ಇಳಿದರೆ, ಕೇವಲ 2.2 ಓವರ್ ಮಾತ್ರವೇ ಪವರ್‌ಪ್ಲೇ ನಡೆಯಲಿದೆ.

ಪವರ್‌ಪ್ಲೇ ವೇಳೆ, ಇಬ್ಬರು ಆಟಗಾರರು ಮಾತ್ರವೇ 30 ಯಾರ್ಡ್‌ ವೃತ್ತದಿಂದ ಹೊರಗೆ ಕ್ಷೇತ್ರರಕ್ಷಣೆ ಮಾಡಬೇಕಾಗುತ್ತದೆ.

ಈ ನಿಯಮಗಳ ಬಗ್ಗೆ ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ವಿವರವಾಗಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.