ADVERTISEMENT

NZ VS BAN| ನ್ಯೂಜಿಲೆಂಡ್‌ಗೆ ಭರ್ಜರಿ ಜಯ

ಏಜೆನ್ಸೀಸ್
Published 28 ಮಾರ್ಚ್ 2021, 13:08 IST
Last Updated 28 ಮಾರ್ಚ್ 2021, 13:08 IST
ರನ್‌ಗಾಗಿ ಓಡಿದ ಡೆವೊನ್ ಕಾನ್ವೆ–ಎಎಫ್‌ಪಿ ಚಿತ್ರ
ರನ್‌ಗಾಗಿ ಓಡಿದ ಡೆವೊನ್ ಕಾನ್ವೆ–ಎಎಫ್‌ಪಿ ಚಿತ್ರ   

ಹ್ಯಾಮಿಲ್ಟನ್‌ : ಅದ್ಭುತ ಲಯವನ್ನು ಮುಂದುವರಿಸಿದ ಡೆವೊನ್ ಕಾನ್ವೆ (ಔಟಾಗದೆ 99) ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಭರ್ಜರಿ ಜಯ ದೊರಕಿಸಿಕೊಟ್ಟರು. ಅವರ ಬ್ಯಾಟಿಂಗ್ ಬಲದಿಂದ ಆತಿಥೇಯ ತಂಡವು ಇಲ್ಲಿ ನಡೆದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 66 ರನ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕಾನ್ವೆ ಹಾಗೂ ವಿಲ್ ಯಂಗ್‌ (53, 30 ಎಸೆತ, 2 ಬೌಂಡರಿ, 4 ಸಿಕ್ಸರ್‌) 105 ರನ್‌ ಸೇರಿಸಿದರು. ಕಾನ್ವೆ ಅವರ 52 ಎಸೆತಗಳ ಇನಿಂಗ್ಸ್ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡ ಆತಿಥೇಯ ತಂಡ 210 ರನ್‌ಗಳನ್ನು ಕಲೆಹಾಕಿತು.

ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 59ಕ್ಕೆ ಆರು ವಿಕೆಟ್‌ ಕೈಚೆಲ್ಲಿದ್ದ ತಂಡಕ್ಕೆ ಅಫಿಫ್‌ ಹುಸೇನ್‌ (45) ಹಾಗೂ ಮೊಹಮ್ಮದ್ ಸೈಫುದ್ದೀನ್ (ಔಟಾಗದೆ 34)ಸ್ವಲ್ಪ ಆಸರೆಯಾದರೂ ತಂಡವನ್ನು ಜಯದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ ಸ್ಪಿನ್ನರ್ ಇಶ್ ಸೋಧಿ (28ಕ್ಕೆ 4) ಪ್ರವಾಸಿ ತಂಡದ ಸೋಲಿಗೆ ಪ್ರಮುಖ ಕಾರಣರಾದರು.

ADVERTISEMENT

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 210 (ಡೆವೊನ್ ಕಾನ್ವೆ ಔಟಾಗದೆ 92, ವಿಲ್ ಯಂಗ್‌ 53, ಮಾರ್ಟಿನ್ ಗಪ್ಟಿಲ್‌ 35, ಗ್ಲೆನ್ ಫಿಲಿಪ್‌ ಔಟಾಗದೆ 24; ನಾಸುಮ್ ಅಹಮ್ಮದ್‌ 30ಕ್ಕೆ 2, ಮೆಹದಿ ಹಸನ್‌ 37ಕ್ಕೆ 1). ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 (ಅಫಿಫ್ ಹುಸೇನ್‌ 45, ಮೊಹಮ್ಮದ್ ಸೈಫುದ್ದೀನ್‌ ಔಟಾಗದೆ 34, ಮೊಹಮ್ಮದ್ ನಯೀಂ 27; ಇಶ್ ಸೋಧಿ 28ಕ್ಕೆ 4, ಲಾಕಿ ಫರ್ಗ್ಯುಸನ್‌ 25ಕ್ಕೆ 2, ಹಮಿಶ್ ಬೆನೆಟ್ 20ಕ್ಕೆ 1). ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 66 ರನ್‌ಗಳ ಗೆಲುವು. ಪಂದ್ಯಶ್ರೇಷ್ಠ: ಡೆವೊನ್ ಕಾನ್ವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.