ಡೆವಾನ್ ಕಾನ್ವೆ
ಹರಾರೆ: ಮ್ಯಾಟ್ ಹೆನ್ರಿ ಅವರ ಉತ್ತಮ ಬೌಲಿಂಗ್ ಮತ್ತು ಡೆವಾನ್ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
40 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿಗಳಿದ್ದ ಅಜೇಯ 59 ರನ್ ಬಾರಿಸಿದ ಕಾನ್ವೆ ಪಂದ್ಯದ ಆಟಗಾರನಾದರು. ಈ ಗೆಲುವಿನಿಂದ ನ್ಯೂಜಿಲೆಂಡ್ ಜುಲೈ 26ರಂದು ನಡೆಯುವ ಫೈನಲ್‌ಗೆ ಬಹುತೇಕ ಸ್ಥಾನ ಕಾದಿರಿಸಿತು.
ಸಂಕ್ಷಿಪ್ತ ಸ್ಕೋರು:
ಜಿಂಬಾಬ್ವೆ: 20 ಓವರುಗಳಲ್ಲಿ 7ಕ್ಕೆ 120 (ವೆಸ್ಲಿ ಮೆಧೆವೆರ್ 36, ಬ್ರಿಯಾನ್ ಬೆನೆಟ್ 21; ಮ್ಯಾಟ್ ಹೆನ್ರಿ 26ಕ್ಕೆ3);
ನ್ಯೂಜಿಲೆಂಡ್: 13.5 ಓವರುಗಳಲ್ಲಿ 2ಕ್ಕೆ 122 (ಡೆವಾನ್ ಕಾನ್ವೆ ಔಟಾಗದೇ 59, ರಚಿನ್ ರವೀಂದ್ರ 30, ಡೆರಿಲ್ ಮಿಚೆಲ್ ಔಟಾಗದೇ 26).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.