ಕ್ರಿಕೆಟ್
(ಸಾಂಕೇತಿಕ ಚಿತ್ರ)
ದುಬೈ: ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ವಿಶ್ಟ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸುವ ಹಾದಿ ಈಗ ಕಡುಕಠಿಣವಾಗಿದೆ. ಏಕೆಂದರೆ ದಂಡ ಶಿಕ್ಷೆಗೆ ಒಳಗಾಗಿರುವ ತಂಡವು 3 ಡಬ್ಲ್ಯುಟಿಸಿ ಪಾಯಿಂಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ನಿಗದಿಯ ಅವಧಿಯಲ್ಲಿ ಓವರ್‌ಗಳನ್ನು ಪೂರೈಸದ ಕಾರಣಕ್ಕೆ ಪಾಯಿಂಟ್ಸ್ ಕಳೆದುಕೊಂಡಿದೆ. ಇದರಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಕುಸಿತ ಕಂಡಿದೆ.
ಇದು ಭಾರತಕ್ಕೆ ಸಂತಸದ ಸುದ್ದಿಯಾಗಿದೆ. ರೋಹಿತ್ ಶರ್ಮಾ ಬಳಗವು ಸದ್ಯ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 61.11 ರ ಪಾಯಿಂಟ್ಸ್ ಪರ್ಸಂಟೇಜ್‌ನಲ್ಲಿ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡದ ಶೇಕಡಾವಾರು ಪಾಯಿಂಟ್‌ಗಳು 47.92ರಷ್ಟಾಗಿದೆ. ಇಂಗ್ಲೆಂಡ್ ಎದುರು ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ನ್ಯೂಜಿಲೆಂಡ್ ಶೇಕಡಾವಾರು ಲೆಕ್ಕವು 55.36ಕ್ಕೇರಬಹುದು. ದಕ್ಷಿಣ ಆಫ್ರಿಕಾ (59.26), ಆಸ್ಟ್ರೇಲಿಯಾ (57.26) ಮತ್ತು ಶ್ರೀಲಂಕಾ (50) ತಂಡಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.