ADVERTISEMENT

ಕ್ರಿಕೆಟ್: ನ್ಯೂಜಿಲೆಂಡ್‌ಗೆ ಮಣಿದ ಪಾಕ್

ಪಿಟಿಐ
Published 20 ಡಿಸೆಂಬರ್ 2020, 15:34 IST
Last Updated 20 ಡಿಸೆಂಬರ್ 2020, 15:34 IST
ಟಿಮ್ ಸೌಥಿ ಸಂಭ್ರಮ  –ಎಎಫ್‌ಪಿ ಚಿತ್ರ
ಟಿಮ್ ಸೌಥಿ ಸಂಭ್ರಮ  –ಎಎಫ್‌ಪಿ ಚಿತ್ರ   

ಹ್ಯಾಮಿಲ್ಟನ್: ಟಿಮ್ ಸೌಥಿ ಬೌಲಿಂಗ್ ಮತ್ತು ಟಿಮ್ ಸೀಫರ್ಟ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ ತಂಡವು ಭಾನುವಾರ ಪಾಕಿಸ್ತಾನ ಎದುರು ನಡೆದ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಮೊಹಮ್ಮದ್ ಹಫೀಜ್ (ಔಟಾಗದೆ 99; 57ಎ, 10ಬೌಂ, 5ಸಿ) ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಸೌಥಿ ನಾಲ್ಕು ವಿಕೆಟ್‌ ಗಳಿಸಿದ್ದರಿಂದ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಗುರಿ ಬೆನ್ನತ್ತಿದ ಕಿವೀಸ್ ತಂಡ ಟಿಮ್ ಸೀಫರ್ಟ್ (84; 63ಎ) ಮತ್ತು ನಾಯಕ ಕೇನ್ ವಿಲಿಯಮ್ಸನ್ (57; 42ಎ) ಅವರ ಅಜೇಯ ಅರ್ಧಶತಕಗಳ ಬಲದಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 8ಕ್ಕೆ163 (ರಿಜ್ವಾನ್ 22, ಮೊಹಮ್ಮದ್ ಹಫೀಜ್ ಔಟಾಗದೆ 99, ಟಿಮ್ ಸೌಥಿ 21ಕ್ಕೆ4), ನ್ಯೂಜಿಲೆಂಡ್: 19.2 ಓವರ್‌ಗಳಲ್ಲಿ 1 ವಿಕೆಟ್‌ಗೆ 164 (ಮಾರ್ಟಿನ್ ಗಪ್ಟಿಲ್ 21, ಟಿಮ್ ಸೀಫರ್ಟ್ ಔಟಾಗದೆ 84, ಕೇನ್ ವಿಲಿಯಮ್ಸನ್ ಔಟಾಗದೆ 57) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 9 ವಿಕೆಟ್‌ಗಳ ಜಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.