ADVERTISEMENT

ಒಂದೇ ಓವರ್‌ನಲ್ಲಿ 2 ವಿಕೆಟ್; ಪ್ಯಾಟ್ ಕಮಿನ್ಸ್‌ ಸಲಹೆ ಸ್ಮರಿಸಿದ ನಿತೀಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2025, 6:43 IST
Last Updated 11 ಜುಲೈ 2025, 6:43 IST
<div class="paragraphs"><p>ನಿತೀಶ್ ರೆಡ್ಡಿ</p></div>

ನಿತೀಶ್ ರೆಡ್ಡಿ

   

(ಪಿಟಿಐ ಚಿತ್ರ)

ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸುವ ಮೂಲಕ ಭಾರತದ ಆಲ್‌ರೌಂಡರ್ ನಿತೀಶ್ ರೆಡ್ಡಿ ಗಮನ ಸೆಳೆದಿದ್ದಾರೆ.

ADVERTISEMENT

ಆ ಮೂಲಕ ಕ್ರಿಕೆಟ್ ಕಾಶಿಯಲ್ಲಿ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಯಶಸ್ಸು ಗಳಿಸಿದ್ದಾರೆ.

ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಪ್ರದರ್ಶನದ ಕುರಿತು ಮಾತನಾಡಿದ ನಿತೀಶ್, 'ಆಸ್ಟ್ರೇಲಿಯಾ ಪ್ರವಾಸದ ಬಳಿಕ ನನ್ನ ಬೌಲಿಂಗ್‌ ಸಾಕಷ್ಟು ಸುಧಾರಣೆ ತರಬೇಕಿದೆ ಎಂಬುದನ್ನು ಮನಗಂಡಿದ್ದೆ' ಎಂದಿದ್ದಾರೆ.

2024-25ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ್ದ ನಿತೀಶ್, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 44 ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು.

ಐಪಿಎಲ್ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಂದ ಸಲಹೆಗಳನ್ನು ಪಡೆದಿದ್ದೆ ಎಂದು ನಿತೀಶ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪಿಚ್ ನಡುವಣ ವ್ಯತ್ಯಾಸವನ್ನು ಕೇಳಿದ್ದೆ. ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಆಟವನ್ನು ಆಡುವಂತೆ ಪ್ಯಾಟ್ ಹುರಿದುಂಬಿಸಿರುವುದಾಗಿ ನಿತೀಶ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ನೆರವನ್ನು ನಿತೀಶ್ ಸ್ಮರಿಸಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನನ್ನ ಪ್ರಗತಿಯನ್ನು ಅವರು ಅವಲೋಕಿಸುತ್ತಿದ್ದಾರೆ. ಮಾರ್ನೆ ಅವರೊಂದಿಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

ಮೂರು ಎಸೆತಗಳ ಅಂತರದಲ್ಲಿ ಇಂಗ್ಲೆಂಡ್‌ನ ಆರಂಭಿಕರಾದ ಬೆನ್ ಡಕೆಟ್ ಮತ್ತು ಹಾಗೂ ಜಾಕ್ ಕ್ರಾಲಿ ಅವರಿಗೆ ನಿತೀಶ್ ರೆಡ್ಡಿ ಪೆವಿಲಿಯನ್ ಹಾದಿ ತೋರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.