ADVERTISEMENT

ಮಹಿಳಾ ಟ್ವೆಂಟಿ20: ಕ್ವಾರಂಟೈನ್‌ ಇಲ್ಲ

ಪಿಟಿಐ
Published 6 ಏಪ್ರಿಲ್ 2022, 15:39 IST
Last Updated 6 ಏಪ್ರಿಲ್ 2022, 15:39 IST
ಕ್ರಿಕೆಟ್
ಕ್ರಿಕೆಟ್   

ನವದೆಹಲಿ: ಈ ಬಾರಿ ಮಹಿಳೆಯರ ದೇಶಿ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವವರು ಕ್ವಾರಂಟೈನ್‌ಗೆ ಒಳಗಾಗಬೇಕಾದ ಅಗತ್ಯವಿಲ್ಲ. ಆದರೆ ಬಯೊಬಬಲ್‌ ವ್ಯವಸ್ಥೆಯನ್ನು ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಮಹಿಳೆಯರ ಟ್ವೆಂಟಿ20 ಟೂರ್ನಿ ಇದೇ 18ರಂದು ಆರಂಭವಾಗಲಿದೆ. ದೇಶದ ಆರು ಕ್ರೀಡಾಂಗಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಕೋವಿಡ್ –19ರಿಂದಾಗಿ ಹಿಂದಿನ ಎರಡು ವರ್ಷಗಳಿಂದ ಕ್ವಾರಂಟೈನ್ ಕಡ್ಡಾಯವಾಗಿತ್ತು. ಎರಡು ವರ್ಷಗಳ ನಂತರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಹಂತದ ಪಂದ್ಯಗಳು ನಡೆದಿದ್ದವು. ಆಗ ಆಟಗಾರರಿಗೆ ಐದು ದಿನಗಳ ಕ್ವಾರಂಟೈನ್ ಕಡ್ಡಾಯವಾಗಿತ್ತು.

ಕೆಲವು ತಿಂಗಳಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಸದ್ಯ ಕ್ವಾರಂಟೈನ್ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ. ನ್ಯೂಜಿಲೆಂಡ್‌ನಲ್ಲಿ ಕಳೆದ ವಾರ ಮುಕ್ತಾಯಗೊಂಡ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತದ ಆಟಗಾರ್ತಿಯರ ಪೈಕಿ ಬಹುತೇಕರು ದೇಶಿ ಟೂರ್ನಿಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ADVERTISEMENT

ಐದು ಎಲೀಟ್ ಗುಂಪುಗಳಲ್ಲಿ ತಲಾ ಆರು ತಂಡಗಳು ಇರಲಿದ್ದು ಪ್ಲೇಟ್ ಗುಂಪಿನಲ್ಲಿ ಏಳು ತಂಡಗಳು ಇರಲಿವೆ. ಪುದುಚೇರಿ, ತಿರುವನಂತಪುರ, ರಾಜ್‌ಕೋಟ್‌, ಮೊಹಾಲಿ, ರಾಂಚಿ ಮತ್ತು ಗುವಾಹಟಿಯಲ್ಲಿ ಪಂದ್ಯಗಳು ನಡೆಯಲಿವೆ. ನಾಕೌಟ್ ಹಂತದ ಹಣಾಹಣಿಗೆ ಸೂರತ್‌ ಆತಿಥ್ಯ ವಹಿಸಲಿದೆ. ಪ್ರತಿ ನಗರದ ಎರಡು ಕ್ರೀಡಾಂಗಣಗಳಲ್ಲಿ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿವೆ. ಬೆಳಿಗ್ಗಿನ ಪಂದ್ಯಗಳು 8.30ಕ್ಕೆ ಆರಂಭವಾಗಲಿದ್ದು ಸಂಜೆಯ ಪಂದ್ಯ 4.30ರಿಂದ ಹೊನಲು ಬೆಳಕಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.