ನವದೆಹಲಿ: 2007ರಲ್ಲಿ ಭಾರತವು ಚೊಚ್ಚಲ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದ 14 ವರ್ಷಗಳ ಸಂಭ್ರಮದ ಅಂಗವಾಗಿ ಸೆಪ್ಟೆಂಬರ್ 24ರಂದು ಹರಭಜನ್ ಸಿಂಗ್ ಟ್ವಿಟರ್ ಪೋಸ್ಟ್‌ವೊಂದನ್ನು ಮಾಡಿದ್ದರು.
ಆದರೆ ಹರಭಜನ್ ಸಿಂಗ್ ಹಂಚಿರುವ ಚಿತ್ರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾನಿಧ್ಯ ಕಂಡುಬಂದಿರಲಿಲ್ಲ.
ಇದು ಧೋನಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಅಲ್ಲದೆ ಚಿತ್ರವನ್ನು ಕ್ರಾಪ್ ಮಾಡಿ ಪ್ರಕಟಿಸಲಾಗಿದೆ ಎಂದು ಆರೋಪಿಸಿದ್ದರು.
ಇದರಿಂದ ಸಹನೆಗೆಟ್ಟ ಹರಭಜನ್,ಮಗದೊಂದುಚಿತ್ರವನ್ನು ಹಂಚುವ ಮೂಲಕ, 'ನಾನು ಕ್ರಾಪ್ ಮಾಡಿರುವುದನ್ನು ನೀವೀಗ ನೆಕ್ಕಬಹುದಾಗಿದೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹರಭಜನ್ ಹಂಚಿರುವ ಮೊದಲ ಚಿತ್ರದಲ್ಲಿ ಬಲಬದಿಯಲ್ಲಿ ಕ್ಯಾಮೆರಾ ಮ್ಯಾನ್‌ರನ್ನು ಮರೆಮಾಚಲು ಟ್ರೋಫಿಯ ಚಿಹ್ನೆಯನ್ನು ಲಗತ್ತಿಸಲಾಗಿತ್ತು. ಆನಂತರ ನೈಜ ಚಿತ್ರ ಪ್ರಕಟಿಸಿ ಟೀಕಾಕಾರರ ವಿರುದ್ಧ ಗರಂ ಆಗಿದ್ದಾರೆ.
ಒಟ್ಟಿನಲ್ಲಿ ಹರಭಜನ್ ವರ್ತನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.