ಮಿಚೆಲ್ ಹೇ
ಹ್ಯಾಮಿಲ್ಟನ್: ಮಿಚೆಲ್ ಹೇ (ಔಟಾಗದೇ 99;78ಎ) ಅವರ ಅಮೋಘ ಬ್ಯಾಟಿಂಗ್ ಮತ್ತು ಬೆನ್ ಸಿಯರ್ಸ್ (59ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 84 ರನ್‌ಗಳಿಂದ ಮಣಿಸಿತು.
ಒಂದು ಪಂದ್ಯ ಬಾಕಿ ಇರುವಂತೆ ಆತಿಥೇಯ ತಂಡವು 2–0ಯಿಂದ ಸರಣಿಯನ್ನು ವಶಮಾಡಿಕೊಂಡಿತು. ಮೊದಲ ಪಂದ್ಯವನ್ನು 73 ರನ್‌ಗಳಿಂದ ಕಿವೀಸ್ ಗೆದ್ದುಕೊಂಡಿತ್ತು. ಶನಿವಾರ ಕೊನೆಯ ಪಂದ್ಯ ನಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 292 ರನ್ ಗಳಿಸಿತು. ಮಿಚೆಲ್ ಇನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಮತ್ತು ಏಳು ಬೌಂಡರಿ ಸೇರಿತ್ತು. ಅವರು ಕೇವಲ ಒಂದು ರನ್‌ನಿಂದ ಚೊಚ್ಚಲ ಶತಕದಿಂದ ವಂಚಿತರಾದರು. ಗುರಿ ಬೆನ್ನತ್ತಿದ ಪಾಕ್ ತಂಡವು 41.1 ಓವರ್‌ಗಳಲ್ಲಿ 208 ರನ್‌ಗಳಿಸಿ ಹೋರಾಟ ಮುಗಿಸಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ 292 (ನಿಕ್ ಕೇಲಿ 31, ಮೊಹಮ್ಮದ್ ಅಬ್ಬಾಸ್ 41, ಮಿಚೆಲ್ ಹೇ ಔಟಾಗದೇ 99; ಮೊಹಮ್ಮದ್ ವಸೀಂ 78ಕ್ಕೆ 2, ಸೂಫಿಯಾನ್ ಮುಕೀಂ 33ಕ್ಕೆ 2). ಪಾಕಿಸ್ತಾನ: 41.2 ಓವರ್‌ಗಳಲ್ಲಿ 208 (ಫಹೀಂ ಅಶ್ರಫ್ 73, ನಸೀಂ ಶಾ 51; ಬೆನ್ ಸಿಯರ್ಸ್ 59ಕ್ಕೆ 5, ಜೇಕಬ್ ಡಫಿ 35ಕ್ಕೆ 3). ಪಂದ್ಯದ ಆಟಗಾರ: ಮಿಚೆಲ್ ಹೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.