ADVERTISEMENT

Ashes Test Series 2023 | ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಇಂಗ್ಲೆಂಡ್ ಸವಾಲು

ಆ್ಯಶಸ್ ಟೆಸ್ಟ್ ಸರಣಿ ಇಂದಿನಿಂದ; ಕಮಿನ್ಸ್, ಸ್ಟೋಕ್ಸ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 13:16 IST
Last Updated 15 ಜೂನ್ 2023, 13:16 IST
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕ್ಲಮ್  ಸಮಾಲೋಚನೆ
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕ್ಲಮ್  ಸಮಾಲೋಚನೆ     (ಎಎಫ್‌ಪಿ ಚಿತ್ರ)

ಲಂಡನ್ : ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಕಿರೀಟ ಧರಿಸಿ ಬೀಗುತ್ತಿರುವ ಆಸ್ಟ್ರೇಲಿಯಾ ತಂಡವು ಶುಕ್ರವಾರದಿಂದ ಆರಂಭವಾಗಲಿರುವ ಆ್ಯಶಸ್  ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಹೋದ ವಾರವಷ್ಟೇ ದ ಒವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಮಣಿಸಿತ್ತು. ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಟೂರ್ನಿಯಾಗಿರುವ ಆ್ಯಶಸ್ ಸರಣಿಯಲ್ಲಿ ಜಿದ್ದಾಜಿದ್ದಿ ನಡೆಸಲಿದೆ. ಆಸ್ಟ್ರೇಲಿಯಾ ತಂಡವು ಹೋದ ವರ್ಷವೂ ಆ್ಯಶಸ್ ಗೆದ್ದಿತ್ತು.  ಆದರೆ ಇಂಗ್ಲೆಂಡ್ ತಂಡವು 2015ರಲ್ಲಿ ಗೆದ್ದ ನಂತರ ಇದುವರೆಗೆ ಜಯಿಸಲು ಸಾಧ್ಯವಾಗಿಲ್ಲ. 2019ರಲ್ಲಿ ಸರಣಿ ಡ್ರಾ ಮಾಡಿಕೊಂಡಿತ್ತು.

ಈ ಬಾರಿ ಮುಖ್ಯ ಕೋಚ್ ಬ್ರೆಂಡನ್ ಮೆಕ್ಲಮ್  ಅವರ ’ಬೇಜ್‌ಬಾಲ್‘ ಶೈಲಿಯೊಂದಿಗೆ ಕಣಕ್ಕಿಳಿಯಲಿರುವ ಬೆನ್‌ ಸ್ಟೋಕ್ಸ್‌ ಬಳಗವು ಈ ಬಾರಿ ಟ್ರೋಫಿ ಜಯಿಸುವ ಛಲದಲ್ಲಿದೆ. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುವ ಹ್ಯಾರಿ ಬ್ರೂಕ್ ತಮ್ಮ ಲಯಕ್ಕೆ ಮರಳಿದರೆ ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಅಮೋಘ ಲಯದಲ್ಲಿರುವ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಅವರನ್ನು ಕಟ್ಟಿಹಾಕುವ ಸವಾಲು ಆತಿಥೇಯ ಬೌಲರ್‌ಗಳ ಮುಂದಿದೆ. ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖ್ವಾಜಾ ಅವರು ಲಯದಲ್ಲಿ ಇಲ್ದಿರುವುದು ಆಸ್ಟ್ರೇಲಿಯಾದ ಚಿಂತೆಯಾಗಿದೆ.

ADVERTISEMENT

ಇಂಗ್ಲೆಂಡ್ ತಂಡದ ಅನುಭವಿ ಜಿಮ್ಮಿ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ಅವರು ಕಮಿನ್ಸ್ ಬಳಗದ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲೊಡ್ಡುವ ಛಲದಲ್ಲಿದ್ದಾರೆ.

ತಂಡಗಳು:

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಒಲೀ ಪೊಪ್, ಜೋ ರೂಟ್, ಹ್ಯಾರಿ ಬ್ರೂಕ್, ಮೋಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲೀ ರಾಬಿನ್ಸನ್ , ಜೇಮ್ಸ್ ಆ್ಯಂಡರ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್.

ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್, ಗ್ರೀನ್, ಮಾರ್ನಸ್ ಲಾಬುಷೇನ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್‌ವುಡ್, ಸ್ಕಾಟ್ ಬೊಲಾಂಡ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್‌ಷಾ ಮಾರ್ಕಸ್ ಹ್ಯಾರಿಸ್

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ಆ್ಯಶಸ್ ಟ್ರೋಫಿ
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು  –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.