ADVERTISEMENT

ಭ್ರಷ್ಟಾಚಾರ ನಿಯಮ ಉಲ್ಲಂಘನೆ: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಅಮಾನತು

ಏಜೆನ್ಸೀಸ್
Published 20 ಫೆಬ್ರುವರಿ 2020, 10:52 IST
Last Updated 20 ಫೆಬ್ರುವರಿ 2020, 10:52 IST
   

ನವದೆಹಲಿ:ಭ್ರಷ್ಟಾಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಉಮರ್‌ ಅಕ್ಮಲ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಲಿಯು (ಪಿಸಿಬಿ) ಅಮಾನತು ಮಾಡಿದೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರಗೆ ಪಾಕಿಸ್ತಾನ ಸೂಪರ್ ಲೀಗ್‌ ಅನ್ನೂ (ಪಿಎಸ್‌ಎಲ್‌) ಒಳಗೊಂಡು ಯಾವುದೇ ಟೂರ್ನಿಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ.

‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಸಂಬಂಧ ಯಾವುದೇ ಪಿಸಿಬಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದುಪಿಸಿಬಿ ಪ್ರಕಟಣೆ ಹೊರಡಿಸಿದೆ.

ಅಕ್ಮಲ್‌,ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಪರವಾಗಿ ಆಡುತ್ತಾರೆ. ಇದೀಗ ಅವರನ್ನು ಅಮಾನತು ಮಾಡಿರುವುದರಿಂದ, ಕ್ವೆಟ್ಟಾ ಪ್ರಾಂಚೈಸ್‌ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ. ‘ಉಮರ್‌ ಅಕ್ಮಲ್‌ ಬದಲು ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲುಕ್ವೆಟ್ಟಾ ಗ್ಲಾಡಿಯೇಟರ್ಸ್‌ಗೆ ಅವಕಾಶವಿದೆ’ ಎಂದೂ ಪಿಸಿಬಿ ಹೇಳಿದೆ.

ADVERTISEMENT

ಲಾಹೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿಇದೇ ತಿಂಗಳ ಆರಂಭದಲ್ಲಿ ತರಬೇತುದಾರನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಅಕ್ಮಲ್‌, ಸ್ವಲ್ಪದರಲ್ಲೇ ಶಿಕ್ಷೆಯಿಂದ ಪಾರಾಗಿದ್ದರು.

29 ವರ್ಷದ ಅಕ್ಮಲ್‌ ಇದುವರೆಗೆ 16 ಟೆಸ್ಟ್‌, 121 ಏಕದಿನ ಮತ್ತು 84 ಟಿ20 ಪಂದ್ಯಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿದ್ದು, ಕ್ರಮವಾಗಿ 1003 ರನ್‌, 3194 ರನ್‌ ಹಾಗೂ 1690 ರನ್ ಗಳಿಸಿದ್ದಾರೆ.

2018ರಲ್ಲಿ ದುಬೈನಲ್ಲಿ ನಡೆದಿದ್ದ ಪಿಎಸ್‌ಎಲ್‌ ಟೂರ್ನಿವೇಳೆಶಾರ್ಜೀಲ್‌ ಖಾನ್‌ ಮತ್ತು ಖಾಲಿದ್‌ ಲತೀಫ್‌ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದರು. ಹೀಗಾಗಿ ಅವರನ್ನು ಟೂರ್ನಿಯಿಂದ ಹೊರಹಾಕಲಾಗಿತ್ತು. ವಿಚಾರಣೆ ಬಳಿಕ ಶಾರ್ಜೀಲ್‌ಗೆ 5 ವರ್ಷ ಮತ್ತು ಲತೀಫ್‌ಗೆ 10 ವರ್ಷಗಳ ನಿಷೇಧ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.