ಇಸ್ಲಾಮಾಬಾದ್: ಇದೇ ಮೊದಲ ಬಾರಿಗೆ ಪಾಕಿಸ್ತಾನವು ಟಿ–20 ಅಂತರರಾಷ್ಟ್ರೀಯ ತ್ರಿಕೋನ ಸರಣಿಗೆ ಆತಿಥ್ಯ ವಹಿಸಲಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮೇರ್ ಅಹ್ಮದ್ ಸೈಯದ್ ಅವರು ಭಾನುವಾರ ತಿಳಿಸಿದ್ದಾರೆ.
ನವೆಂಬರ್‌ನಲ್ಲಿ 13 ದಿನಗಳ ಕಾಲ ಟೂರ್ನಿ ಜರುಗಲಿದೆ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫ್ಗಾನಿಸ್ತಾನ ತಂಡಗಳು ಟ್ರೋಫಿಗಾಗಿ ಸೆಣಸಲಿವೆ.
‘ಈ ಟೂರ್ನಿಯು ಮುಂದಿನ ಟಿ–20 ವಿಶ್ವಕಪ್‌ಗೆ ಪೂರ್ವಸಿದ್ದತೆ ಅಷ್ಟೇ ಅಲ್ಲ. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಪಂದ್ಯಗಳನ್ನು ನೀಡುವುದು ನಮ್ಮ ಉದ್ದೇಶ’ ಎಂದು ಸುಮೇರ್ ಅಹ್ಮದ್ ಸೈಯದ್ ಹೇಳಿದ್ದಾರೆ.
ಅಫ್ಗಾನಿಸ್ತಾನ ತಂಡವು ಇದೇ ಮೊದಲ ಬಾರಿಗೆ ಪಾಕ್ ನೆಲದಲ್ಲಿ ಟಿ–20 ಪಂದ್ಯಗಳನ್ನು ಆಡಲಿದೆ.
ಪಾಕಿಸ್ತಾನದ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ಜರುಗಲಿವೆ. ಟೂರ್ನಿಯ ಫೈನಲ್ ಪಂದ್ಯವು ನ. 29ರಂದು ಲಾಹೋರ್‌ನಲ್ಲಿ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.