ಅತಾ ತರಾರ್
ಲಾಹೋರ್: ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರ ಸಾವಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೀಡಿರುವ ಹೇಳಿಕೆಯು ‘ನಿರ್ದಿಷ್ಟ ಆಯ್ಕೆ’ ಮತ್ತು ‘ಪಕ್ಷಪಾತ’ದ ಸ್ವರೂಪದಿಂದ ಕೂಡಿದೆ ಎಂದು ಪಾಕಿಸ್ತಾನದ ಸಚಿವ ಅತಾ ತರಾರ್ ಹೇಳಿದ್ದಾರೆ.
ಪಾಕಿಸ್ತಾನವು, ಅಫ್ಗಾನಿಸ್ತಾನ ಗಡಿಯ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಈ ಮೂವರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದರು. ವೈಮಾನಿಕ ದಾಳಿಯಲ್ಲಿ ಕ್ರಿಕೆಟಿಗರ ಸಾವಿಗೆ ಸಂತಾಪ ಸೂಚಿಸಿ, ಅಫ್ಗನ್ ಕ್ರಿಕೆಟ್ ಮಂಡಳಿ ಜೊತೆ ನಿಲ್ಲುವುದಾಗಿ ಶನಿವಾರ ಐಸಿಸಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಗಳನ್ನು ನೀಡಿದ್ದವು. ಆದರೆ ಪಾಕಿಸ್ತಾನದ ಹೆಸರು ಉಲ್ಲೇಖಿಸಿರಲಿಲ್ಲ.
ದಾಳಿಯಿಂದಲೇ ಆಟಗಾರರು ಸತ್ತಿದ್ದಾರೆನ್ನುವ ಅಫ್ಗಾನಿಸ್ತಾನ ಮಂಡಳಿಯ ಹೇಳಿಕೆ ಖಚಿತಪಡಿಸುವ ಗೋಜಿಗೂ ಐಸಿಸಿ ಮುಂದಾಗಲಿಲ್ಲ ಎಂದು ತರಾರ್ ಭಾನುವಾರ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನವೇ ವರ್ಷಗಳಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.