ADVERTISEMENT

Pakistan vs South Africa| ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 18:11 IST
Last Updated 28 ಜನವರಿ 2021, 18:11 IST
ಯಾಸೀರ್ ಶಾ –ಎಎಫ್‌ಪಿ ಚಿತ್ರ
ಯಾಸೀರ್ ಶಾ –ಎಎಫ್‌ಪಿ ಚಿತ್ರ   

ಕರಾಚಿ (ಎಎಫ್‌ಪಿ): ಸ್ಪಿನ್ನರ್ ಯಾಸೀರ್ ಶಾ (53ಕ್ಕೆ3) ಅವರ ಮೋಡಿಯಿಂದಾಗಿ ಆತಿಥೇಯ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಬಳಗದ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡಿದೆ.

ಇದರಿಂದಾಗಿ ಮೂರನೇ ದಿನದಾಟದ ಕೊನೆಗೆ ಪ್ರವಾಸಿ ಬಳಗವು 75 ಓವರ್‌ 4 ವಿಕೆಟ್‌ಗಳಿಗೆ 187 ರನ್‌ ಗಳಿಸಿದೆ.

ಏಡನ್ ಮರ್ಕರಂ (74 ರನ್) ಮತ್ತು ರಸಿ ವ್ಯಾನ್ ಡರ್ ಡಸೆ (64 ರನ್) ಅರ್ಧಶತಕ ದಾಖಲಿಸಿದರು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 220 ರನ್‌ ಗಳಿಸಿತ್ತು. ಪಾಕ್ ತಂಡವು ಫವಾದ್ ಆಲಂ ಶತಕದ ಬಲದಿಂದ 378 ರನ್‌ ಗಳಿಸಿತು. 158 ರನ್‌ಗಳ ಮುನ್ನಡೆ ಪಡೆದಿತ್ತು. ಅದನ್ನು ಚುಕ್ತಾ ಮಾಡಿರುವ ಪ್ರವಾಸಿ ತಂಡವು ಆತಿಥೇಯರಿಗೆ ಕಠಿಣ ಗುರಿಯೊಡ್ಡುವ ಉತ್ಸಾಹದಲ್ಲಿತ್ತು. ಆದರೆ ಅದಕ್ಕೆ ಯಾಸೀರ್ ಅಡ್ಡಗಾಲು ಹಾಕಿದರು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 69.2 ಓವರ್‌ಗಳಲ್ಲಿ 220, ಪಾಕಿಸ್ತಾನ:119.2 ಓವರ್‌ಗಳಲ್ಲಿ 378. ಎರಡನೇ ಇನಿಂಗ್ಸ್‌: ದಕ್ಷಿಣ ಆಫ್ರಿಕಾ: 75 ಓವರ್‌ಗಳಲ್ಲಿ 4ಕ್ಕೆ187 (ಏಡನ್ ಮರ್ಕರಂ 74, ಡೀನ್ ಎಲ್ಗರ್ 29, ರಸಿ ವ್ಯಾನ್ ಡರ್ ಡಸೆನ್ 64, ಯಾಸೀರ್ ಶಾ 53ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.