ADVERTISEMENT

T20 World Cup: ವಿಶ್ವಕಪ್ ಟೂರ್ನಿಗೆ ತೆರಳಲಿರುವ ಪಾಕ್?

ಪಿಟಿಐ
Published 30 ಜನವರಿ 2026, 17:18 IST
Last Updated 30 ಜನವರಿ 2026, 17:18 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡವು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಫೆಬ್ರುವರಿ 2ರಂದು ಶ್ರೀಲಂಕೆಗೆ ತೆರಳಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಇದರಿಂದಾಗಿ ಪಾಕಿಸ್ತಾನವು ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವ ನಿರ್ಧಾರ ಕೈಬಿಟ್ಟಿದೆ ಎಂದು ಹೇಳಲಾಗಿದೆ.

ADVERTISEMENT

ಈಚೆಗೆ ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಐಸಿಸಿಯು ಹೊರಹಾಕಿತ್ತು. ಐಸಿಸಿಯ ಈನಿರ್ಣಯವನ್ನು ಖಂಡಿಸಿದ್ದ ಪಾಕ್ ತಂಡವು ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. 

‘ಪಾಕ್ ಕ್ರಿಕೆಟ್ ಮಂಡಳಿಯುವ ಆಟಗಾರರ ಪ್ರಯಾಣಕ್ಕೆ ಈಗಾಗಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಕೊಲಂಬೊಗೆ ಫೆ.2ರಂದು ತಂಡವು ತೆರಳಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ಪಾಕ್ ತಂಡವು ತನ್ನ ಪಾಲಿನ ಎಲ್ಲ ಪಂದ್ಯಗಳನ್ನೂ ಶ್ರೀಲಂಕೆಯಲ್ಲಿ ಆಡಲಿದೆ. ಆದ್ದರಿಂದ ಯಾವುದೇ ಭದ್ರತೆ ನೆಪವನ್ನು ಹೇಳಲು ಆಗದು. ಪಾಕ್ ತಂಡಕ್ಕೆ ಬಹಿಷ್ಕಾರ ಮಾಡಲು ಯಾವುದೇ ಕಾರಣವಿಲ್ಲ’ ಎಂದೂ ಅವರು ಅಧಿಕಾರಿ ಹೇಳಿದ್ದಾರೆ.

ಫೆ. 15ರಂದು ಪಾಕ್ ತಂಡವು ಭಾರತ ತಂಡದ ಎದುರು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.