ಪ್ಯಾಟ್ ಕಮಿನ್ಸ್
ಮೆಲ್ಬರ್ನ್: ಬೆನ್ನುನೋವಿನಿಂದಾಗಿ ಆಸ್ಟ್ರೇಲಿಯಾದ ಅಗ್ರ ವೇಗಿ ಮತ್ತು ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರುಗಳ ಕ್ರಿಕೆಟ್ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ತಿಳಿಸಿದೆ.
ಮುಂಬರುವ ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಅವರ ‘ಪುನಃಶ್ಚೇತನ’ ನಿರ್ವಹಣೆ ನಡೆಯುತ್ತಿದೆ ಎಂದೂ ತಿಳಿಸಿದೆ.
ಆಸ್ಟ್ರೇಲಿಯಾ ತಂಡವು ತವರಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಅಕ್ಟೋಬರ್ 1ರಿಂದ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಇದರ ನಂತರ ಪ್ರವಾಸಿ ಭಾರತ ತಂಡದ ವಿರುದ್ಧ ಮೂರು ಏಕದಿನ (ಅಕ್ಟೋಬರ್ 19–25ರ ನಡುವೆ) ಮತ್ತು ಐದು ಟಿ20 ಪಂದ್ಯಗಳನ್ನು (ಅ. 29 ರಿಂದ ನವೆಂಬರ್ 8ರ ಅವಧಿಯಲ್ಲಿ) ಆಡಲಿದೆ.
ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಆ್ಯಷಸ್ ಸರಣಿ ನವೆಂಬರ್ 21ರಂದು ಪರ್ತ್ ಟೆಸ್ಟ್ ಮೂಲಕ ಆರಂಭವಾಗಲಿದೆ.
ಬೆನ್ನುನೋವು ಕಾಣಿಸಿಕೊಳ್ಳುವ ಮೊದಲು 32 ವರ್ಷ ವಯಸ್ಸಿನ ಕಮಿನ್ಸ್ ಇಂಗ್ಲೆಂಡ್ ಮತ್ತು ವೆಸ್ ಇಂಡೀಸ್ ತಂಡಗಳ ವಿರುದ್ಧ ಸರಣಿಯ 4 ಟೆಸ್ಟ್‌ಗಳಲ್ಲಿ 95 ಓವರುಗಳನ್ನು ಬೌಲ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.