
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಮೆಕಾಯ್ (ಆಸ್ಟ್ರೇಲಿಯಾ): ಪಟೇಲ್‌ದ್ವಯರಾದ ಹೆನಿಲ್–ಖಿಲಾನ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡವು ಎರಡನೇ ಯೂತ್ ‘ಟೆಸ್ಟ್’ ಪಂದ್ಯದಲ್ಲಿ ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 9 ರನ್ ಮುನ್ನಡೆ ಪಡೆದಿವೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ತಂಡವು ಬಲಗೈ ವೇಗಿ ಹೆನಿಲ್ (21ಕ್ಕೆ3) ಹಾಗೂ ಎಡಗೈ ಸ್ಪಿನ್ನರ್ ಖಿಲಾನ್ (23ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 43.3 ಓವರ್‌ಗಳಲ್ಲಿ 135 ರನ್‌ಗಳಿಗೆ ಕುಸಿಯಿತು. ವಿಕೆಟ್‌ಕೀಪರ್ ಅಲೆಕ್ಸ್ ಲೀ ಯಂಗ್ (66, 108ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಬಳಿಕ ಭಾರತ ತಂಡವೂ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಒಂದು ಹಂತದಲ್ಲಿ 82 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ, ಖಿಲಾನ್ (26, 60ಎ) ಹಾಗೂ ಹೆನಿಲ್ (ಔಟಾಗದೇ 23, 69ಎ) ಏಳನೇ ವಿಕೆಟ್‌ಗೆ 48 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಪ್ರವಾಸಿ ತಂಡ ಮೊದಲ ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 144 ರನ್ ಗಳಿಸಿ, 9 ರನ್‌ಗಳ ಅಲ್ಪ ಮುನ್ನಡೆ ಪಡೆದಿದೆ. ಹೆನಿಲ್ ಅವರೊಂದಿಗೆ ದೀಪೇಶ್ ದೇವೇಂದ್ರನ್ (ಔಟಾಗದೇ 6) ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ: 43.3 ಓವರ್‌ಗಳಲ್ಲಿ 135(ಅಲೆಕ್ಸ್ ಲೀ ಯಂಗ್ 66, ಯಶ್ ದೇಶಮುಖ್ 22, ಹೆನಿಲ್ ಪಟೇಲ್ 21ಕ್ಕೆ3, ಖಿಲಾನ್ ಪಟೇಲ್ 23ಕ್ಕೆ3, ಉದ್ಧವ್ ಮೋಹನ್ 23ಕ್ಕೆ2) ಭಾರತ 19 ವರ್ಷದೊಳಗಿನವರ ತಂಡ: 40 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 144 (ಖಿಲಾನ್ ಪಟೇಲ್ 26, ವೇದಾಂತ್ ತ್ರಿವೇದಿ 25, ಹೆನಿಲ್ ಪಟೇಲ್ 22, ಕ್ಯಾಸಿ ಬಾರ್ಟನ್ 39ಕ್ಕೆ3, ವಿಲ್ ಬೈರಮ್ 33ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.