ADVERTISEMENT

ಸ್ಪಾಟ್‌ ಫಿಕ್ಸಿಂಗ್‌: ಉಮರ್‌ ಅಕ್ಮಲ್‌ ಅಮಾನತು

ಪಿಟಿಐ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST
ಉಮರ್ ಅಕ್ಮಲ್‌
ಉಮರ್ ಅಕ್ಮಲ್‌   

ಕರಾಚಿ: ಸ್ಪಾಟ್‌ ಫಿಕ್ಸಿಂಗ್‌ಗೆ ವ್ಯಕ್ತಿಯೊಬ್ಬರು ಸಂಪ ರ್ಕಿಸಿದ್ದ ಸಂಗತಿಯನ್ನು ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಉಮರ್‌ ಅಕ್ಮಲ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಗುರುವಾರ ಅಮಾನತು ಮಾಡಿದೆ. ಅವರ ಮೇಲೆ ಭ್ರಷ್ಟಾಚಾರ ತಡೆ ಘಟಕದ ವಿಚಾರಣೆ ನಡೆಯಬೇಕಿದೆ.

ಆದರೆ ಪಿಸಿಬಿ ತನ್ನ ಅಧಿಕೃತ ಹೇಳಿಕೆಯಲ್ಲಿ ಅಕ್ಮಲ್‌ ಯಾವ ರೀತಿಯ ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಬಗ್ಗೆ ಉಲ್ಲೇಖಿಸಿಲ್ಲ. ‘ವಿಚಾರಣೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಪಿಸಿಬಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದೂ ಹೇಳಿಕೆ ತಿಳಿಸಿದೆ.

ಬ್ಯಾಟ್ಸ್‌ಮನ್‌ ಆಗಿರುವ 29 ವರ್ಷದ ಉಮರ್‌, ಮಾಜಿ ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ಅವರ ಕಿರಿಯ ಸೋದರ. ಹಾಲಿ ನಾಯಕ ಬಾಬರ್‌ ಆಜಂ ಅವರ ಸೋದರ ಸಂಬಂಧಿ ಕೂಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.