ADVERTISEMENT

ಗಂಗೂಲಿ ಜೊತೆ ಸಭೆ ನಡೆಸಲಿದ್ದಾರೆ ಮೋದಿ: ಸಚಿನ್, ಕೊಹ್ಲಿ ಭಾಗವಹಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 5:33 IST
Last Updated 3 ಏಪ್ರಿಲ್ 2020, 5:33 IST
   

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‌ ಭೀತಿ ಸೃಷ್ಟಿಯಾದ ಬಳಿಕ ಕ್ರೀಡಾ ಮಂಡಳಿಯೊಂದರ ಜೊತೆ ಪ್ರಧಾನಿ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.

ಕೋಲ್ಕತ್ತದಲ್ಲಿರುವ ತಮ್ಮ ನಿವಾಸದಲ್ಲಿದ್ದುಕೊಂಡೇ ಗಂಗೂಲಿ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯವರೂ ಸಭೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಾಗತಿಕ ಪಿಡುಗು ಕೋವಿಡ್‌–19 ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿರುವ ಈ ಹೊತ್ತಿನಲ್ಲಿ ಜನ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳ ಜವಾಬ್ದಾರಿಯಬಗ್ಗೆ ಮೋದಿ ಒತ್ತಿ ಹೇಳುವ ನಿರೀಕ್ಷೆಯಿದೆ.

ADVERTISEMENT

ಸೌರವ್‌ ಗಂಗೂಲಿ ಸದ್ಯ ಮುಂದೂಡಲಾಗಿರುವ ಐಪಿಲ್‌–2020 ಹಾಗೂ ಕ್ರಿಕೆಟ್‌ಗೆ ಸಂಬಂಧಿಸಿದ ಉಳಿದ ವಿಚಾರಗಳ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

ಮಾರ್ಚ್‌ 29 ರಿಂದ ಆರಂಭವಾಗಬೇಕಿದ್ದ ಈ ಬಾರಿಯ ಐಪಿಎಲ್‌ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದ ಇದೇ ತಿಂಗಳು 15ರ ವರೆಗೆ ಮುಂದೂಡಲಾಗಿದೆ. ಒಂದು ವೇಳೆ ಈ ಟೂರ್ನಿ ರದ್ದಾದರೆ ಅಪಾರ ನಷ್ಟ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.