ADVERTISEMENT

ಕ್ರಿಕೆಟ್‌: ನೇಪಾಳ ತಂಡಕ್ಕೆ ಪ್ರಭಾಕರ್ ಕೋಚ್

ಪಿಟಿಐ
Published 9 ಆಗಸ್ಟ್ 2022, 11:22 IST
Last Updated 9 ಆಗಸ್ಟ್ 2022, 11:22 IST
ಮನೋಜ್‌ ಪ್ರಭಾಕರ್‌
ಮನೋಜ್‌ ಪ್ರಭಾಕರ್‌    

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಮನೋಜ್‌ ಪ್ರಭಾಕರ್‌ ಅವರು ನೇಪಾಳ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

1984 ರಿಂದ 1996ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಪ್ರಭಾಕರ್‌, 39 ಟೆಸ್ಟ್‌ ಮತ್ತು 130 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಈ ಹಿಂದೆ ದೆಹಲಿ, ರಾಜಸ್ತಾನ ಮತ್ತು ಉತ್ತರ ಪ್ರದೇಶ ರಣಜಿ ತಂಡಗಳ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

2016 ರಲ್ಲಿ ಅಲ್ಪ ಅವಧಿಗೆ ಅಫ್ಗಾನಿಸ್ತಾನ ರಾಷ್ಟ್ರೀಯ ತಂಡದ ಬೌಲಿಂಗ್‌ ಕೋಚ್‌ ಆಗಿದ್ದರು.

ADVERTISEMENT

‘ನೇಪಾಳದಲ್ಲಿ ಕ್ರಿಕೆಟ್‌ ಬಗ್ಗೆ ಇರುವ ಆಸಕ್ತಿ ಮತ್ತು ಅಲ್ಲಿನ ಯುವ ಪ್ರತಿಭೆಗಳನ್ನು ನೋಡುವಾಗ ನೇಪಾಳ ರಾಷ್ಟ್ರೀಯ ತಂಡದ ಕೋಚ್‌ ಆಗಿ ಕೆಲಸ ಮಾಡುವುದನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ’ ಎಂದು ಪ್ರಭಾಕರ್‌ ಪ್ರತಿಕ್ರಿಯಿಸಿದ್ದಾರೆ.

ನೇಪಾಳ ತಂಡದ ಕೋಚ್‌ ಆಗಿದ್ದ ಪುಬುದು ದಸ್ಸನಾಯಕೆ ಅವರು ಜುಲೈನಲ್ಲಿ ಹುದ್ದೆಯಿಂದ ಕೆಳಗಿಳಿದು, ಕೆನಡಾ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.