ADVERTISEMENT

ನಿಂದನೆ: ರಫೀಕ್ ಕ್ಷಮೆ ಯಾಚನೆ

ಪಿಟಿಐ
Published 19 ನವೆಂಬರ್ 2021, 14:06 IST
Last Updated 19 ನವೆಂಬರ್ 2021, 14:06 IST

ಲಂಡನ್‌: ಜನಾಂಗೀಯ ನಿಂದನೆಯ ಸಂದೇಶ ಕಳುಹಿಸಿದ ಆರೋಪಕ್ಕೆ ಒಳಗಾಗಿರುವ ಯಾರ್ಕ್‌ಶೈರ್‌ ತಂಡದ ಮಾಜಿ ಆಟಗಾರ ಅಜೀಮ್ ರಫೀಕ್ ಶುಕ್ರವಾರ ಕ್ಷಮೆ ಕೋರಿದ್ದಾರೆ.

2011ರಲ್ಲಿ ತಾವು ಕಳುಹಿಸಿದ ಸಂದೇಶ ಕ್ಷಮೆಗೆ ಅರ್ಹವಾದುದಲ್ಲ. ಆ ಸಂದೇಶದ ಬಗ್ಗೆ ವಿಷಾದವಿದೆ ಎಂದು ಅವರು ಹೇಳಿದ್ದಾರೆ.

30 ವರ್ಷದ ರಫೀಕ್ ತಾವು 19 ವರ್ಷದವರಾಗಿದ್ದಾಗ ಸಂದೇಶ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈಚೆಗೆ ನನ್ನ ಖಾತೆಯನ್ನು ಪರಿಶೀಲಿಸಿದಾಗ ಅದು ಗಮನಕ್ಕೆ ಬಂದಿದೆ. ಅದು ಕಂಡು ನಾಚಿಕೆಯಾಯಿತು. ಆದ್ದರಿಂದ ಅಳಿಸಿಹಾಕಿದ್ದೇನೆ‘ ಎಂದು ರಫೀಕ್ ಹೇಳಿಕೊಂಡಿದ್ದಾರೆ.

ADVERTISEMENT

ರಫೀಕ್‌ ಹಾಗೂ ವಾರ್ವಿಕ್ ಶೈರ್–ಲೆಸಿಸ್ಟರ್‌ಶೈರ್ ತಂಡಗಳ ಮಾಜಿ ಆಟಗಾರ ಅತೀಕ್ ಜಾವೆದ್ ಅವರು ಫೇಸ್‌ಬುಕ್‌ನಲ್ಲಿ ಯಹೂದಿ ವಂಶಸ್ಥ ವ್ಯಕ್ತಿಯೊಬ್ಬರ ಕುರಿತ ಹಂಚಿಕೊಂಡಿದ್ದ ಚಿತ್ರಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.