ADVERTISEMENT

IPL 2025: ಚಿನ್ನಸ್ವಾಮಿ ಅಂಗಳದಲ್ಲಿ ದ್ರಾವಿಡ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 12:10 IST
Last Updated 23 ಏಪ್ರಿಲ್ 2025, 12:10 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ತಂಡದ ನೆರವು ಸಿಬ್ಬಂದಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಆಟಗಾರರ ಅಭ್ಯಾಸದ ಮೇಲೆ ನಿಗಾ ವಹಿಸಿದ್ದರು  ಆರ್‌ಆರ್ ಚಿತ್ರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ತಂಡದ ನೆರವು ಸಿಬ್ಬಂದಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಆಟಗಾರರ ಅಭ್ಯಾಸದ ಮೇಲೆ ನಿಗಾ ವಹಿಸಿದ್ದರು  ಆರ್‌ಆರ್ ಚಿತ್ರ   

ಬೆಂಗಳೂರು: ಸತತ ನಾಲ್ಕು ಸೋಲುಗಳಿಂದ ಹತಾಶೆಗೊಂಡಿರುವ ರಾಜಸ್ಥಾನ ರಾಯಲ್ಸ್ ತಂಡವು ಜಯದ ಹಾದಿಗೆ ಮರಳುವ ತವಕದಲ್ಲಿದೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಗೆಲುವಿನ ನಿರೀಕ್ಷೆಯಲ್ಲಿದೆ. 

ಅದಕ್ಕಾಗಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ರಾಯಲ್ಸ್ ಆಟಗಾರರು ಅಭ್ಯಾಸ ನಡೆಸಿದರು.
ಗಾಲಿಕುರ್ಚಿಯಲ್ಲಿದ್ದ ರಾಹುಲ್ ದ್ರಾವಿಡ್‌ ಅವರೊಂದಿಗೆ ನೆರವು ಸಿಬ್ಬಂದಿ ಕೂಡ ಇದ್ದರು.

ಆಟಗಾರರಾದ ರಿಯಾನ್ ಪರಾಗ್, ವೇಗಿ ಜೋಫ್ರಾ ಆರ್ಚರ್ ಹಾಗೂ ಧ್ರುವ ಜುರೇಲ್ ಸೇರಿದಂತೆ ಕೆಲವು ಆಟಗಾರರಷ್ಟೇ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬುಧವಾರ ಪೂರ್ಣಪ್ರಮಾಣದ ಅಭ್ಯಾಸದಲ್ಲಿ ತಂಡದ ಎಲ್ಲ ಆಟಗಾರರೂ ಭಾಗವಹಿಸುವರು. 

ರಾಜಸ್ಥಾನ ತಂಡವು 8 ಪಂದ್ಯಗಳನ್ನು ಆಡಿದೆ. ಅದರಲ್ಲಿ 2 ಗೆದ್ದು, 6ರಲ್ಲಿ ಸೋತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.