ADVERTISEMENT

IPL-2020 | RR vs KKR: ರಾಜಸ್ಥಾನ ತಂಡಕ್ಕೆ ನಿರ್ಣಾಯಕ ಪಂದ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 10:13 IST
Last Updated 1 ನವೆಂಬರ್ 2020, 10:13 IST
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್   

ದುಬೈ: ‘ಮಾಡು ಇಲ್ಲವೇ ಮಡಿ’ ಸ್ಥಿತಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಸೆಣಸಲಿದೆ.

ಚೆನ್ನೈ ಎದುರಿನ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್ ಸೋತು, ಇಲ್ಲಿ ರಾಜಸ್ಥಾನ ಗೆದ್ದರೆ 14 ಪಾಯಿಂಟ್ಸ್‌ನೊಂದಿಗೆ ಪ್ಲೇಆಫ್‌ ಕದ ತಟ್ಟುವ ಸಣ್ಣ ಅವಕಾಶ ವೊಂದಿದೆ. ತನ್ನ ಕಳೆದ ಎರಡು ಪಂದ್ಯ ಗಳಲ್ಲಿ ಜಯಿಸುವ ಮೂಲಕ ಸ್ಟೀವನ್ ಸ್ಮಿತ್ ಬಳಗವು ಈ ಅವಕಾಶವನ್ನು ಜೀವಂತವಾಗಿಟ್ಟುಕೊಂಡಿದೆ.

ರನ್‌ರೇಟ್‌ ಸರಾಸರಿಯಲ್ಲಿ ಕಿಂಗ್ಸ್ ಮತ್ತು ರಾಯಲ್ಸ್ ತಂಡಕ್ಕಿಂತ ಹಿಂದಿರುವ ಕೋಲ್ಕತ್ತ ತಂಡವು ಪ್ಲೇ ಆಫ್‌ ಹಾದಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಇದರಿಂದಾಗಿ ಕೋಲ್ಕತ್ತ ತಂಡವು ಗೆದ್ದರೆ ಕೂದಲೆಳೆಯಷ್ಟು ಪ್ರಮಾಣದ ಅವಕಾಶ ಇರಲಿದೆ. ರಾಯಲ್ಸ್, ಕೆಕೆಆರ್ ಮತ್ತು ಕಿಂಗ್ಸ್ ತಲಾ 12 ಪಾಯಿಂಟ್ಸ್‌ ಹೊಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.