ADVERTISEMENT

ಹರ್ಷಿತ್‌ ರಾಣಾಗೆ ಐಸಿಸಿಯಿಂದ ವಾಗ್ದಂಡನೆ!

ಪಿಟಿಐ
Published 3 ಡಿಸೆಂಬರ್ 2025, 13:03 IST
Last Updated 3 ಡಿಸೆಂಬರ್ 2025, 13:03 IST
<div class="paragraphs"><p>ಹರ್ಷಿತ್‌ ರಾಣಾ </p></div>

ಹರ್ಷಿತ್‌ ರಾಣಾ

   

ಪಿಟಿಐ ಚಿತ್ರ

ದುಬೈ: ರಾಂಚಿಯಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್‌ ಬ್ರೆವಿಸ್‌ ವಿರುದ್ಧ ಆಕ್ರಮಣಕಾರಿ ರೀತಿ ವರ್ತಿಸಿದ್ದಕ್ಕೆ ಭಾರತ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಅವರಿಗೆ ಐಸಿಸಿಯು ವಾಗ್ದಂಡನೆ ವಿಧಿಸಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್‌ ಪಾಯಿಂಟ್ ಸಹ ಸೇರಿಸಿದೆ.

ADVERTISEMENT

‘ರಾಣಾ ಅವರು ಐಸಿಸಿ ಶಿಸ್ತು ಸಂಹಿತೆಯ ಲೆವೆಲ್‌ ವನ್ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ’ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ಇನಿಂಗ್ಸ್‌ನ 22ನೇ ಓವರಿನಲ್ಲಿ ಈ ಘಟನೆ ನಡೆದಿತ್ತು. ಬ್ರೆವಿಸ್‌ ಅವರ ವಿಕೆಟ್‌ ಪಡೆದಿದ್ದ ರಾಣಾ ಅವರು ಡ್ರೆಸಿಂಗ್‌ ರೂಮ್‌ನತ್ತ ನಡೆಯುವಂತೆ ಸಂಜ್ಞೆ ಮಾಡಿದ್ದರು. ಇದು ಬ್ಯಾಟರ್‌ನನ್ನು ಪ್ರಚೋದಿಸುವ ರೀತಿಯಲ್ಲಿತ್ತು.

24 ತಿಂಗಳ ಅವಧಿಯಲ್ಲಿ ಮೊದಲ ಬಾರಿ ರಾಣಾ ಖಾತೆಗೆ ಡಿಮೆರಿಟ್ ಪಾಯಿಂಟ್‌ ಸೇರಿದೆ. ರಾಣಾ ಮೊದಲ ಏಕದಿನ ಪಂದ್ಯದಲ್ಲಿ 65 ರನ್‌ಗಳಿಗೆ 3 ವಿಕೆಟ್‌ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.