
ಜಮ್ಮು ಮತ್ತು ಕಾಶ್ಮೀರ ತಂಡದ ವೇಗಿ ಆಕಿಬ್ ನಬಿ ದಾರ್
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ: ಈ ಸಲದ ರಣಜಿ ಋತುವಿನಲ್ಲಿ ಜಮ್ಮು- ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ದೂಳೆಬ್ಬಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 58 ವಿಕೆಟ್ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೂ ನಡುಕ ಹುಟ್ಟಿಸಿದ್ದಾರೆ.
ಪಂದ್ಯದ ಮೂರನೇ ದಿನದಾಟದಲ್ಲಿ ಗುರುವಾರ ಕರ್ನಾಟಕ ತಂಡದ ಪ್ರಮುಖ ಮೂರು ವಿಕೆಟ್ ಕಿತ್ತ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ರೀಸ್‌ನಲ್ಲಿ ಯಾವ ಬ್ಯಾಟರ್ ಇದ್ದಾರೆ ಎಂಬುದಕ್ಕೆ ಗಮನ ಕೊಡದೆ ಉತ್ತಮ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದೆ. ವಿಕೆಟ್ ಪಡೆಯುವ ವಿಶ್ವಾಸ ಇತ್ತು. ತಂಡದ ಯೋಜನೆಯೂ ಅದೇ ಆಗಿತ್ತು ಎಂದು ನಬಿ ಹೇಳಿದರು.
ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡರೆ ಎಷ್ಟು ಉತ್ತಮ ಬ್ಯಾಟರ್ ಇದ್ದರೂ ವಿಕೆಟ್ ಪಡೆಯಬಹುದು. ಪ್ರತಿ ವಿಕೆಟ್ ಸಹ ಮಹತ್ವದ್ದಾಗಿದೆ ಎಂದರು.
ನಮ್ಮ ತಂಡ 584 ರನ್ ಗಳಿಸಿದ್ದು, ಉತ್ತಮ ಮೊತ್ತವಾಗಿದೆ. ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡುತ್ತಿದೆ. ಉತ್ತಮ ಜಾಗದಲ್ಲಿ ಬೌಲಿಂಗ್ ಮಾಡುವುದಿಂದ ಬ್ಯಾಟರ್‌ಗಳಿಗೆ ಕಷ್ಟವಾಗುತ್ತದೆ. ಹೊಸ ಚೆಂಡಿನಲ್ಲಿ ವೇಗಿಗಳಿಗೆ ಹೆಚ್ಚು ನೆರವು ಸಿಗುವ ಸಾಧ್ಯತೆ ಇದೆ. ಸ್ಪಿನ್ನರ್‌ಗಳಿಗೂ ಯಶಸ್ಸು ಸಿಗುತ್ತಿದೆ. ನಾಲ್ಕನೇ ದಿನದಲ್ಲಿ (ಶನಿವಾರ) ಮೊದಲ ಅವಧಿ ಮಹತ್ವದ್ದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.