ADVERTISEMENT

Ranji Trophy | ಕರುಣ್ ನಾಯರ್ ಶತಕ ಸೂಪರ್

ರಣಜಿ ಟ್ರೋಫಿ: ವಿದರ್ಭ ತಂಡಕ್ಕೆ ಆಸರೆಯಾದ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 15:34 IST
Last Updated 8 ಫೆಬ್ರುವರಿ 2025, 15:34 IST
<div class="paragraphs"><p>ವಿದರ್ಭ ತಂಡದ ಕರುಣ್ ನಾಯರ್ ಶತಕ ಸಂಭ್ರಮ&nbsp; </p></div>

ವಿದರ್ಭ ತಂಡದ ಕರುಣ್ ನಾಯರ್ ಶತಕ ಸಂಭ್ರಮ 

   

–ಪಿಟಿಐ ಚಿತ್ರ

ನಾಗಪುರ: ವಿದರ್ಭ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ಕರುಣ್ ನಾಯರ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸುಂದರ ಶತಕ  ದಾಖಲಿಸಿದರು. 

ADVERTISEMENT

ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ  ತಮಿಳುನಾಡು ತಂಡದ ವಿರುದ್ಧ ಆರಂಭವಾದ ಎಂಟರ ಘಟ್ಟದ ಪಂದ್ಯ ಮೊದಲ ದಿನದಾಟದಲ್ಲಿ ವಿದರ್ಭ ತಂಡವು 89 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 264 ರನ್ ಗಳಿಸಿತು.  

44 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿದರ್ಭ ತಂಡಕ್ಕೆ ಕರುಣ್ ನಾಯರ್ (ಬ್ಯಾಟಿಂಗ್ 100; 180ಎ, 4X14, 6X1) ಮತ್ತು ದಾನೀಶ್ ಮಳೆವಾರ್ (75; 119ಎ, 4X13) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತದತ್ತ ಕಾಲಿಟ್ಟಿತು. 

ಈ ಬಾರಿಯ ದೇಶಿ ಋತುವಿನಲ್ಲಿ ಅಮೋಘ ಲಯದಲ್ಲಿರುವ 33 ವರ್ಷದ ಕರುಣ್ ಅವರಿಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 22ನೇ ಶತಕ.  ಗುಂಪು ಹಂತದಲ್ಲಿ ಹೈದರಾಬಾದ್ ವಿರುದ್ಧವೂ ಅವರು ಶತಕ ಗಳಿಸಿದರು. ಈಚೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅವರು ನಾಲ್ಕು ಶತಕಗಳನ್ನು ಹೊಡೆದಿದ್ದರು. 

ತಮಿಳುನಾಡು ತಂಡದ ಬೌಲರ್ ವಿಜಯ್ ಶಂಕರ್ (50ಕ್ಕೆ2) ಅವರು ದಾನೀಶ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.  ಕರುಣ್ ಕ್ರೀಸ್‌ನಲ್ಲಿದ್ದಾರೆ.

ಚಿಂತನ್, ಪಟೇಲ್ ಮಿಂಚು: ನಾಯಕ ಚಿಂತನ್ ಗಜಾ (48ಕ್ಕೆ4) ಮತ್ತು ಜಯಮೀತ್ ಪಟೇಲ್ (37ಕ್ಕೆ2) ಅವರ ಅಮೋಘ ಬೌಲಿಂಗ್ ಬಲದಿಂದ ಗುಜರಾತ್ ತಂಡವು ಇಲ್ಲಿ ನಡೆಯುತ್ತಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು 216 ರನ್‌ಗಳಿಗೆ ಕಟ್ಟಿಹಾಕಿತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 89 ಓವರ್‌ಗಳಲ್ಲಿ 6ಕ್ಕೆ264 (ಧ್ರುವ ಶೋರೆ 26, ದಾನಿಶ್ ಮಳೆವಾರ್ 75, ಕರುಣ್ ನಾಯರ್ ಬ್ಯಾಟಿಂಗ್ 100, ಅಕ್ಷಯ್ ವಾಡಕರ್ 24, ವಿಜಯ ಶಂಕರ್ 50ಕ್ಕೆ2) ವಿರುದ್ಧ ತಮಿಳುನಾಡು. 

ರಾಜ್‌ಕೋಟ್:

ಸೌರಾಷ್ಟ್ರ: 72.1 ಓವರ್‌ಗಳಲ್ಲಿ 216 (ಹರ್ವಿಕ್ ದೇಸಾಯಿ 22, ಚಿರಾಗ್ ಜಾನಿ 69, ಚೇತೇಶ್ವರ್ ಪೂಜಾರ 26, ಅರ್ಪಿತ್ ವಸವಡಾ ಔಟಾಗದೆ 39, ಧರ್ಮೆಂದ್ರಸಿಂಹ ಜಡೇಜ 22,  ಚಿಂತನ್ ಗಜಾ 48ಕ್ಕೆ4, ಜೈಮೀತ್ ಪಟೇಲ್ 37ಕ್ಕೆ2, ಸಿದ್ಧಾರ್ಥ್ ದೇಸಾಯಿ 35ಕ್ಕೆ2) .

ಗುಜರಾತ್: 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 21 (ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ 11, ಆರ್ಯ ದೇಸಾಯಿ ಬ್ಯಾಟಿಂಗ್ 10) 

ಪುಣೆ:

ಜಮ್ಮು–ಕಾಶ್ಮೀರ: 86 ಓವರ್‌ಗಳಲ್ಲಿ 8ಕ್ಕೆ228 (ಯಾವೆರ್ ಹಸನ್ 24, ಕನಯ್ಯಾ ವಾಧ್ವಾನ್ 48, ಸಾಹಿಲ್ ಲೋತ್ರಾ 35, ಲೋನ್ ನಾಸಿರ್ ಮುಜಾಫಿರ್ 44, ಅಬಿದ್ ಮುಷ್ತಾಕ್ 19, ಮೊಹಮ್ಮದ್ ನಿಧೀಶ್ 56ಕ್ಕೆ5) ವಿರುದ್ಧ ಕೇರಳ. 

ಮುಂಬೈಗೆ ಶಮ್ಸ್–ತನುಷ್ ಆಸರೆ

ಕೋಲ್ಕತ್ತ (ಪಿಟಿಐ): ಮುಂಬೈ ತಂಡಕ್ಕೆ ಮತ್ತೊಮ್ಮೆ ಬಾಲಂಗೋಚಿ ಬ್ಯಾಟರ್  ಶಮ್ಸ್ ಮುಲಾನಿ  ಹಾಗೂ ತನುಷ್ ಕೋಟ್ಯಾನ್   ಅವರು ಆಸರೆಯಾದರು.  ಹರಿಯಾಣ ವಿರುದ್ಧ ಆರಂಭವಾದ ಕ್ವಾರ್ಟರ್‌ಫೈನಲ್‌ನಲ್ಲಿ ತನುಷ್ ಮತ್ತು ಶಮ್ಸ್ ಅವರು ಎಂಟನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಸೇರಿಸಿದರು.

ಇದರಿಂದಾಗಿ ದಿನದಾಟದ ಅಂತ್ಯಕ್ಕೆ ಮುಂಬೈ ತಂಡವು 81 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 278 ರನ್ ಗಳಿಸಿತು. ತನುಷ್ (ಬ್ಯಾಟಿಂಗ್ 85; 154ಎ) ಕ್ರೀಸ್‌ನಲ್ಲಿದ್ದಾರೆ.  ಶಮ್ಸ್ (91; 178ಎ) ಶತಕದಂಚಿನಲ್ಲಿ ಎಡವಿದರು. ಆದರೆ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.

ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ಹರಿಯಾಣ ವೇಗಿ ಅನ್ಷುಲ್ ಕಾಂಭೋಜ್ (58ಕ್ಕೆ3) ಮತ್ತು ಸುಮಿತ್ ಕುಮಾರ್ (57ಕ್ಕೆ2) ಅವರಿಬ್ಬರ ಉತ್ತಮ ದಾಳಿಯಿಂದಾಗಿ ಮುಂಬೈ  ತಂಡವು 113 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು.  ಈ ಸಂದರ್ಭದಲ್ಲಿ ಶಮ್ಸ್‌ ದಿಟ್ಟ ಆಟವಾಡಿದರು. ಅವರಿಗೆ ತನುಷ್ ಜೊತೆಗೂಡಿದರು. ಗುಂಪು ಹಂತದ ಕೆಲವು ಪಂದ್ಯಗಳಲ್ಲಿಯೂ ಮುಂಬೈ ತಂಡಕ್ಕೆ ಕೊನೆ ಕ್ರಮಾಂಕದ ಬ್ಯಾಟರ್‌ಗಳು ಆಸರಎಯಾಗಿದ್ದರು. 

ಸಂಕ್ಷಿಪ್ತ ಸ್ಕೋರು:

ಮುಂಬೈ: 81 ಓವರ್‌ಗಳಲ್ಲಿ 8ಕ್ಕೆ278 (ಅಜಿಂಕ್ಯ ರಹಾನೆ 31 ಶಿವಂ ದುಬೆ 28 ಶಮ್ಸ್ ಮುಲಾನಿ 91 ತನುಷ್ ಕೋಟ್ಯಾನ್ ಬ್ಯಾಟಿಂಗ್ 85 ಅನ್ಷುಲ್ ಕಾಂಭೋಜ್ 58ಕ್ಕೆ3 ಸುಮಿತ್ ಕುಮಾರ್ 57ಕ್ಕೆ2) ವಿರುದ್ಧ: ಹರಿಯಾಣ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.