
ಕೋಲ್ಕತ್ತ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 27 ರನ್ ಗಳಿಸಿದ ಆಲ್‌ರೌಂಡರ್ ರವೀಂದ್ರ ಜಡೇಜ ಅಂತರರಾಷ್ಟ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ಸ್ ಮತ್ತು 300ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದರು.
ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ 11 ರನ್ ಗಳಿಸುತ್ತಿದ್ದಂತೆ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 4000 ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 4000ಕ್ಕೂ ಅಧಿಕ ರನ್‌ಗಳು ಹಾಗೂ 300ಕ್ಕೂ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರ ಹಾಗೂ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಲ್‌ರೌಂಡರ್ ಎನಿಸಿಕೊಂಡರು.
ಜಡೇಜ ಅವರಿಗಿಂತ ಮೊದಲು ಈ ಸಾಧನೆಯನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದರು. ಅವರು ತಮ್ಮ ಟೆಸ್ಟ್ ಕರಿಯರ್‌ನಲ್ಲಿ 5248 ರನ್ ಹಾಗೂ 434 ವಿಕೆಟ್ ಪಡೆದಿದ್ದಾರೆ.
4000+ ರನ್ಸ್ ಹಾಗೂ 300ಕ್ಕೂ ಅಧಿಕ ವಿಕೆಟ್ ಪಡೆದ ವಿಶ್ವದ ಇತರೆ ಆಟಗಾರರು?
ಇಯಾನ್ ಬೋಥಮ್ (ಇಂಗ್ಲೆಂಡ್) – 5200 ರನ್ಸ್, 383 ವಿಕೆಟ್ಸ್
ಕಪೀಲ್ ದೇವ್ (ಭಾರತ) – 5248 ರನ್ಸ್, 434 ವಿಕೆಟ್ಸ್
ಡ್ಯಾನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) – 4532 ರನ್ಸ್, 362 ವಿಕೆಟ್ಸ್
ರವೀಂದ್ರ ಜಡೇಜ (ಭಾರತ)– 4000* ರನ್ಸ್ ಹಾಗೂ 338 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.