ADVERTISEMENT

ಆರ್‌ಸಿಬಿಗೆ ಡೇಲ್‌ ಸ್ಟೇನ್‌: ಬೌಲಿಂಗ್‌ಗೆ ತುಂಬುವರೇ ಬಲ?

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 3:08 IST
Last Updated 13 ಏಪ್ರಿಲ್ 2019, 3:08 IST
   

ಬೆಂಗಳೂರು: ಪ್ರಸಕ್ತ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡವು ಆಸ್ಟ್ರೇಲಿಯನ್‌ ಬೌಲರ್‌ನಾಥನ್ ಕೌಲ್ಟರ್-ನೈಲ್ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್‌ ಸ್ಟೇನ್‌ ಅವರನ್ನು ಬದಲಾವಣೆ ಆಧಾರದಲ್ಲಿ ಪಡೆದುಕೊಂಡಿದೆ.

ಸ್ಟೇನ್‌ ಅವರು ಏಪ್ರಿಲ್‌ 19ರಂದು ಕೋಲ್ಕತಾ ವಿರುದ್ಧದ ಪಂದ್ಯಕ್ಕೆಲಭ್ಯವಾಗಲಿದ್ದಾರೆ. ಸ್ಟೇಲ್‌ ಆಗಮನದೊಂದಿಗೆ ಆರ್‌ಸಿಬಿ ತಂಡದ ಬೌಲಿಂಗ್‌ ವಿಭಾಗ ಬಲವರ್ಧನೆಗೊಳ್ಳುವ ನಿರೀಕ್ಷೆಗಳಿವೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾತನ್‌ ಕೌಂಟರ್‌–ನೈಲ್ ಅವರು ವಿಶ್ರಾಂತಿಗೆ ತೆರಳುತ್ತಿದ್ದು, ಅವರ ಬದಲಿಗೆ ಆರ್‌ಸಿಬಿ ತಂಡ ಡೇಲ್‌ ಸ್ಟೇನ್‌ ಅವರನ್ನು ಖರೀದಿಸಿದೆ. 2018ರ ಐಪಿಎಲ್‌ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ತಂಡವು ನಾತನ್‌ ಕೌಂಟರ್‌–ನೈಲ್‌ ಅವರನ್ನು ₹2.2 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಅದೇ ಮೊತ್ತಕ್ಕೆ ಸದ್ಯ ಡೇಲ್‌ ಸ್ಟೇನ್‌ ಅವರನ್ನೂ ಖರೀದಿ ಮಾಡಲಾಗಿದೆ.

ADVERTISEMENT

ಸ್ಟೇನ್‌ ಅವರು 2008–10ರಲ್ಲಿ ಆರ್‌ಸಿಬಿ ಪರ 27 ವಿಕೆಟ್‌ ಪಡೆದಿದ್ದರು. 2016ರ ಐಪಿಎಲ್‌ನಲ್ಲಿ ಅವರು, ಗುಜರಾತ್‌ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಐಪಿಎಲ್‌ ನಿಯಮಾವಳಿಗಳ ಪ್ರಕಾರ ಬದಲಾವಣೆ ಆಧಾರದಲ್ಲಿ ಆಟಗಾರರನ್ನು ಖರೀದಿಸುವಂತಿದ್ದರೆ, ಮೂಲ ಆಟಗಾರನಿಗೆ ನಿಗದಿಯಾದ ಹಣದಲ್ಲೇ ಮತ್ತೊಬ್ಬ ಆಟಗಾರನನ್ನೂ ಖರೀದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.