ADVERTISEMENT

ಮಹಿಳಾ ಟಿ20 ವಿಶ್ವಕಪ್‌: ಟೂರ್ನಿಯ ಆಟಗಾರ್ತಿ ಸ್ಪರ್ಧೆಯಲ್ಲಿ ರಿಚಾ

ಪಿಟಿಐ
Published 25 ಫೆಬ್ರುವರಿ 2023, 13:16 IST
Last Updated 25 ಫೆಬ್ರುವರಿ 2023, 13:16 IST
ರಿಚಾ ಘೋಷ್‌
ರಿಚಾ ಘೋಷ್‌   

ದುಬೈ: ಭಾರತದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಚಾ ಘೋಷ್‌ ಅವರು ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ‘ಶ್ರೇಷ್ಠ ಆಟಗಾರ್ತಿ’ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದಾರೆ. ಈ ಗೌರವ ಗಿಟ್ಟಿಸಲು ಒಟ್ಟು ಒಂಬತ್ತು ಆಟಗಾರ್ತಿಯರ ನಡುವೆ ಪೈಪೋಟಿ ಇದೆ.

19 ವರ್ಷದ ರಿಚಾ ಐದು ಇನಿಂಗ್ಸ್‌ಗಳಿಂದ ಒಟ್ಟು 168 ರನ್‌ ಕಲೆಹಾಕಿದ್ದಾರೆ. ಅವರು ಎರಡು ಸಲ ಮಾತ್ರ ಔಟಾಗಿದ್ದಾರೆ. 130ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ ಹೊಂದಿದ್ಧಾರೆ. ವಿಕೆಟ್‌ ಹಿಂದುಗಡೆಯೂ ಅವರು ಚುರುಕಿನ ಪ್ರದರ್ಶನ ನೀಡಿದ್ದರು. ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ಸೋತು ಹೊರಬಿದ್ದಿತ್ತು.

ಆಸ್ಟ್ರೇಲಿಯಾದ ಮೂವರು, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ ಇಬ್ಬರು ಮತ್ತು ವೆಸ್ಟ್‌ ಇಂಡೀಸ್‌ನ ಒಬ್ಬರು ಸ್ಪರ್ಧೆಯಲ್ಲಿದ್ದಾರೆ.

ADVERTISEMENT

ಬ್ಯಾಟರ್‌ಗಳಾದ ಮೆಗ್‌ ಲ್ಯಾನಿಂಗ್‌ (139 ರನ್‌), ಅಲಿಸಾ ಹೀಲಿ (171 ರನ್‌) ಮತ್ತು ಆಲ್‌ರೌಂಡರ್‌ ಆ್ಯಶ್‌ ಗಾರ್ಡನರ್‌ (81 ರನ್‌ ಮತ್ತು 9 ವಿಕೆಟ್‌) ಅವರು ಕಣದಲ್ಲಿರುವ ಆಸ್ಟ್ರೇಲಿಯಾದ ಆಟಗಾರ್ತಿಯರು.

ದಕ್ಷಿಣ ಆಫ್ರಿಕಾದ ಲಾರಾ ವಾಲ್ವ್‌ವಾರ್ಡ್‌, ತಜ್ಮಿನ್‌ ಬ್ರಿಟ್ಸ್‌ ಮತ್ತು ವೆಸ್ಟ್‌ ಇಂಡೀಸ್‌ನ ಹೇಯ್ಲಿ ಮ್ಯಾಥ್ಯೂಸ್‌ ಅವರೂ ಪ್ರಶಸ್ತಿ ರೇಸ್‌ನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.