
ಭಾರತ ತಂಡದ ಆಟಗಾರರು
–ಪಿಟಿಐ ಚಿತ್ರ
ಚೆನ್ನೈ: ಟಿ20 ವಿಶ್ವಕಪ್ 2026ರ ಮಹತ್ವದ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಕ್ರಿಕೆಟ್ ಮೈದಾನ ವೇದಿಕೆಯಾಗಿದೆ. ಇಂದು ಜಿಂಬಾಂಬ್ವೆ ವಿರುದ್ಧ ನಡೆಯುವ ಪಂದ್ಯವನ್ನು ಭಾರತ ತಂಡವು ಬೃಹತ್ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ನಡುವೆ ಭಾರತ ತಂಡಕ್ಕೆ ಶುಭ ಸುದ್ದಿಯೊಂದು ಬಂದಿದೆ.
ಭಾರತ ತಂಡದಲ್ಲಿ ಫಿನಿಷರ್ ಜವಾಬ್ದಾರಿ ನಿರ್ವಹಿಸುತ್ತಿರುವ ರಿಂಕು ಸಿಂಗ್ ಅವರು ಈ ಪಂದ್ಯಕ್ಕೂ ಮುನ್ನ ಕುಟುಂಬದ ತುರ್ತು ಕೆಲಸದ ನಿಮಿತ್ತ ತಂಡದಿಂದ ನಿರ್ಗಮಿಸಿದ್ದರು. ಇದೀಗ ರಿಂಕು ಸಿಂಗ್ ಅವರು ತಂಡಕ್ಕೆ ಮರಳಲಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ತಿಳಿಸಿದ್ದಾರೆ.
’ರಿಂಕು ಅವರು ತಂದೆಗೆ ಹುಷಾರಿಲ್ಲದ ಕಾರಣದಿಂದಾಗಿ ಅವರನ್ನು ನೋಡಲು ಮನೆಗೆ ತೆರಳಿದ್ದರು. ಇಂದು (ಗುರುವಾರ) ಸಂಜೆ ವೇಳೆಗೆ ರಿಂಕು ಹಿಂತಿರುಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ‘ ಎಂದು ಕೋಟಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.