ADVERTISEMENT

Vijay Hazare Trophy: ರೋಹಿತ್‌ ಶರ್ಮಾ ಶತಕ; ಸಿಕ್ಕಿಂ ವಿರುದ್ಧ ಮುಂಬೈಗೆ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 14:03 IST
Last Updated 24 ಡಿಸೆಂಬರ್ 2025, 14:03 IST
   

ಜೈಪುರ: ವಿಜಯ್‌ ಹಜಾರೆ ಟ್ರೋಫಿಯ ಮೊದಲ ದಿನ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರ ಶತಕದ ನೆರವಿನಿಂದ ಮುಂಬೈ ತಂಡವು 8 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಜೈಪುರದ ಸವಾಮಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್‌ ಗೆದ್ದ ಸಿಕ್ಕಿಂ ತಂಡವು ಮೊದಲು ಬ್ಯಾಟಿಂಗ್ ಆಯ್ದಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡವು 50 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 236 ರನ್‌ ಗಳಿಸಿತು.

ADVERTISEMENT

237 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಅನುಭವಿ ಆಟಗಾರ ರೋಹಿತ್‌ ಶರ್ಮಾ ಅವರು 94 ಎಸೆತಗಳಲ್ಲಿ 155 ರನ್‌(18 ಬೌಂಡರಿ, 9 ಸಿಕ್ಸರ್) ಗಳಿಸುವ ಮೂಲಕ ಆಸರೆಯಾದರು.

ಲಿಸ್ಟ್‌ – ಎ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರ 37ನೇ ಶತಕವಾಗಿದೆ.

ಮುಂಬೈ ತಂಡವು 30.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ 8 ವಿಕೆಟ್‌ಗಳ ಗೆಲುವು ಸಾಧಿಸಿತು.

ಸ್ಕೋರುಗಳು:

ಸಿಕ್ಕಿಂ: 50 ಓವರುಗಳಲ್ಲಿ 7ಕ್ಕೆ 236 (ಸಾಯಿ ಸಾತ್ವಿಕ್ 34, ಆಶಿಶ್ ಥಾಪಾ 79, ಕ್ರಾಂತಿಕುಮಾರ್ 34; ಶಾರ್ದೂಲ್ ಠಾಕೂರ್ 19ಕ್ಕೆ2)

ಮುಂಬೈ: 30.3 ಓವರುಗಳಲ್ಲಿ 2ಕ್ಕೆ 237 (ಅಂಕ್ರಿಷ್‌ ರಘುವಂಶಿ 38, ರೋಹಿತ್ ಶರ್ಮಾ 155, ಮುಶೀರ್ ಖಾನ್ ಔಟಾಗದೇ 27).

ಪಂದ್ಯ ಶ್ರೇಷ್ಠ ಆಟಗಾರ: ರೋಹಿತ್ ಶರ್ಮಾ