ADVERTISEMENT

ರೋಹಿತ್ ಶರ್ಮಾ ಔಟಾಗಿಲ್ಲ ಎಂದ ಅಭಿಮಾನಿಗಳು; ಮೂರನೇ ಅಂಪೈರ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 4:12 IST
Last Updated 28 ಜೂನ್ 2019, 4:12 IST
   

ಮ್ಯಾಂಚೆಸ್ಟರ್: ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾಔಟ್ ಎಂದು ತೀರ್ಪುನೀಡಿದಅಂಪೈರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ರೋಹಿತ್ ಔಟ್ ಆಗಿಲ್ಲ, ಅಂಪೈರ್ ತಪ್ಪಾದ ತೀರ್ಪು ನೀಡಿದ್ದಾರೆ ಎಂಬುದು ಅಭಿಮಾನಿಗಳ ವಾದ.

ಒಂದು ಬೌಂಡರಿ, ಒಂದು ಸಿಕ್ಸರ್ ಸಿಡಿಸಿ 23 ಎಸೆತಗಳಲ್ಲಿ 18 ರನ್ ಗಳಿಸಿದ್ದಾಗ ರೋಹಿತ್ ಔಟಾಗಿದ್ದರು.ಕೆಮರ್ ರೋಚ್ ಎಸೆದ 6ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ಶಾಯ್ ಹೋಪ್ ಕ್ಯಾಚ್ ಹಿಡಿದಿದ್ದರು.

ಕ್ಷಣಕ್ಷಣದ ಸ್ಕೋರ್‌:https://bit.ly/31VGjP9

ADVERTISEMENT

ಆದರೆ ಫೀಲ್ಡ್ ಅಂಪೈರ್ಔಟ್ ನೀಡಿರಲಿಲ್ಲ,.ಹೀಗಿರುವಾಗ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಡಿಆರ್‌ಎಸ್ ಮನವಿ ಮಾಡಿದ್ದರು. ಅಲ್ಟ್ರಾಎಜ್‌ (UltraEdge)ನಲ್ಲಿ ಚೆಂಡು ತಾಗಿದ್ದರು ಅದು ಬ್ಯಾಟ್‌ಗೆ ತಾಗಿದ್ದೋ, ಪ್ಯಾಡ್‌ಗೆ ತಾಗಿದ್ದೋ ಎಂದು ಸ್ಪಷ್ಟವಾಗಿರಲಿಲ್ಲ. ಆದರೆ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಇದನ್ನೂ ಓದಿ:20 ಸಾವಿರ ರನ್‌ಗಳ ಸರದಾರ ವಿರಾಟ್‌ ಕೊಹ್ಲಿ

ಬ್ರಾಡ್ ಹಾಗ್, ಜೊಫ್ರಾ ಆರ್ಚರ್, ಆಕಾಶ್ ಚೋಪ್ರಾ ಮೊದಲಾದವರು ಅಂಪೈರ್ ತೀರ್ಪನ್ನು ಪ್ರಶ್ನಿಸಿದ್ದಾರೆ. ಕೊನೆಯ ಎಸೆತ ಎಸೆಯುವಾಗ ಮೂರನೇ ಅಂಪೈರ್ ಮನೆಗೆ ಓಡುವುದು ಒಳ್ಳೆಯದು ಎಂದು ಅರ್ಚರ್ ಟ್ವೀಟಿಸಿದ್ದಾರೆ.

ರೋಹಿತ್ ಔಟ್ ಆಗಿರುವುದನ್ನು ನೋಡಿ ವಿಐಪಿ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಪತ್ನಿ ರಿತಿಕಾ ಕೂಡಾ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ಅಂಪೈರ್ ಮೈಕಲ್ ಗೌಫ್ ವಿಕಿಪೀಡಿಯಪುಟ ತಿದ್ದಿ ಆಕ್ರೋಶ
ರೋಹಿತ್ ಶರ್ಮಾ ಔಟ್ ಎಂದು ತೀರ್ಪು ನೀಡಿದ ಮೂರನೇ ಏಂಪೈರ್ ಮೈಕಲ್ ಗೌಫ್ ಅವರ ವಿಕಿಪೀಡಿಯ ಪುಟದಲ್ಲಿತಿದ್ದುಪಡಿ ಮಾಡಿರೋಹಿತ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಟ್ವೀಟ್ ಪ್ರತಿಕ್ರಿಯೆ

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.