ಆರ್‌ಸಿಬಿ ಆಟಗಾರ್ತಿಯರ ಸಂಭ್ರಮ
ಚಿತ್ರಕೃಪೆ: X ಹಾಗೂ @RCBTweets
ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿಯರು ಭಾರತದ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದ್ದಾರೆ.
ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಟಗಾರ್ತಿಯರು ಸೀರೆ, ಲೆಹೆಂಗಾ, ಲಂಗ ದಾವಣಿ, ಚೂಡಿದಾರ್ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರಿಗೆ, ತಂಡದ ಸಹಾಯಕ ಸಿಬ್ಬಂದಿ ಸಾಥ್ ನೀಡಿದ್ದಾರೆ.
ಈ ವೇಳೆ ಕ್ಲಿಕ್ಕಿಸಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಆರ್‌ಸಿಬಿ ಹಂಚಿಕೊಂಡಿದೆ. ವಿದೇಶಿ ಆಟಗಾರ್ತಿಯರು ಸೀರೆ ತೊಟ್ಟಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ತಂಡದ ನಾಯಕಿ ಸ್ಮೃತಿ ಮಂದಾನ ಅವರು ಎಲ್ಲಿಯೂ ಕಾಣದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೀಗಾಗಿ, ಆರ್‌ಸಿಬಿಯ ಪೋಸ್ಟ್‌ಗೆ 'ಸ್ಮೃತಿ ಎಲ್ಲಿ?' ಎಂದು ಪ್ರಶ್ನಿಸಿದ್ದಾರೆ.
ಟೂರ್ನಿಯಲ್ಲಿ ಈ ವರೆಗ ಆರು ಪಂದ್ಯಗಳಲ್ಲಿ ಆಡಿರುವ ಆರ್‌ಸಿಬಿ ಮೊದಲೆರಡು ಪಂದ್ಯಗಳಲ್ಲಷ್ಟೇ ಗೆದ್ದಿದೆ. ಉಳಿದೆಲ್ಲ ಪಂದ್ಯಗಳನ್ನೂ ಸೋತು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನೆರಡು ಪಂದ್ಯಗಳನ್ನು ಕ್ರಮವಾಗಿ ಯಪಿ ವಾರಿಯರ್ಸ್ (ಮಾರ್ಚ್ 8) ಹಾಗೂ ಮುಂಬೈ ಇಂಡಿಯನ್ಸ್ (ಮಾರ್ಚ್ 11) ವಿರುದ್ಧ ಆಡಲಿದೆ.
ಚಿತ್ರಕೃಪೆ: X ಹಾಗೂ @RCBTweets
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.